ಶಿಕಾರಿಪುರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!

ಶಿಕಾರಿಪುರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!

ಶಿಕಾರಿಪುರ, ಸೆ. 17: ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಅಳವಡಿಸಿಕೊಂಡು, ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದ, ಬೈಕ್ ಸವಾರರಿಗೆ ಶಾಕ್ ನೀಡುವ ಕಾರ್ಯಕ್ಕೆ ಜಿಲ್ಲೆಯ ಶಿಕಾರಿಪುರ ಉಪ ವಿಭಾಗ ಪೊಲೀಸರು ಚಾಲನೆ ನೀಡಿದ್ದಾರೆ!

ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ಮೂಲಕ, ಡಿಫೆಕ್ಟಿವ್ (ದೋಷಪೂರಿತ) ಹಾಗೂ ಮಾಡಿಫೈಡ್ (ಮಾರ್ಪಾಡು) ಸೈಲೆನ್ಸರ್ ಗಳನ್ನು ಶಿಕಾರಿಪುರ ಪಟ್ಟಣ ಹಾಗೂ ತಾಲೂಕಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ವಶಕ್ಕೆ ಪಡೆದಿದ್ದ ದೋಷಪೂರಿತ – ಮಾರ್ಪಾಡು ಸೈಲೆನ್ಸರ್ ಗಳನ್ನು ಸೆ. 17 ರಂದು ಸಂಜೆ ಶಿಕಾರಿಪುರ ಪಟ್ಟಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಬುಲ್ಡೋಜರ್ ಹರಿಸಿ ಪೊಲೀಸರು ನಾಶಗೊಳಿಸಿದ್ದಾರೆ.

ಒಟ್ಟಾರೆ 20 ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಶಿಕಾರಿಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ರುದ್ರೇಶ್, ಪಿಎಸ್ಐ ಮಂಜುನಾಥ್ ಸಿದ್ದಪ್ಪ ಕುರಿ ಸೇರಿದಂತೆ ಪೊಲೀಸ್ ಅಧಿಕಾರಿ – ಸಿಬ್ಬಂಧಿಗಳು ಉಪಸ್ಥಿತರಿದ್ದರು. 

ಎಚ್ಚರಿಕೆ: ‘ಯಾವುದೇ ಕಾರಣಕ್ಕೂ ದ್ವಿ ಚಕ್ರ ವಾಹನಗಳಲ್ಲಿ ದೋಷಪೂರಿತ, ಮಾರ್ಪಾಡುಗೊಳಿಸಿದ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳಬಾರದು. ನಿರಂತರವಾಗಿ ದೋಷಪೂರಿತ ಸೈಲೆನ್ಸರ್ ಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು’ ಎಂದು ಶಿಕಾರಿಪುರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ರಿಪ್ಪನ್ ಪೇಟೆಯಲ್ಲಿ ಪೊಲೀಸ್ ಪಥ ಸಂಚಲನ Previous post ಶಿವಮೊಗ್ಗ, ರಿಪ್ಪನ್ ಪೇಟೆಯಲ್ಲಿ ಪೊಲೀಸ್ ಪಥ ಸಂಚಲನ
ಸಾಗರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ Next post ಸಾಗರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ