ತುಂಗಾ ನದಿಯಲ್ಲಿ ಮುಳುಗಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳು : ಓರ್ವನ ಶವ ಪತ್ತೆ!

ತುಂಗಾ ನದಿಯಲ್ಲಿ ಮುಳುಗಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳು : ಓರ್ವನ ಶವ ಪತ್ತೆ!

ಶಿವಮೊಗ್ಗ, ಸೆ. 18: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬರ ಪಾಳ್ಯ ಸಮೀಪದ ತುಂಗಾ ನದಿಯಲ್ಲಿ, ಕಾಲೇಜು ಯುವಕರಿಬ್ಬರು ಆಕಸ್ಮಿಕವಾಗಿ ಮುಳುಗಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಓರ್ವನ ಶವ ಪತ್ತೆಯಾಗಿದೆ.

ಮೊಹಮ್ಮದ್ (19) ನದಿಯಲ್ಲಿ ಶವವಾಗಿ ಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಅಂಜುಂ (19) ಎಂಬ ಯುವಕನ ಶೋಧ ಕಾರ್ಯ ನಡೆಸಲಾಗುತ್ತಿದೆ. ಇವರಿಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಮಧ್ಯಾಹ್ನ ಇವರಿಬ್ಬರು ತುಂಗಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ನಾಗೇಶ್ ಎಂ. ಎನ್. ನೇತೃತ್ವದ ತಂಡವು, ಬೋಟ್ ಮೂಲಕ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

ಸಾಗರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ Previous post ಸಾಗರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ
ಇಸ್ರೋ ವಿಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮ Next post ಇಸ್ರೋ ವಿಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮ