ಶಿವಮೊಗ್ಗ : ಮೆಸ್ಕಾಂ ಪ್ರಕಟಣೆ ಸೆ. 23 ರಂದು ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಸೆ.24 ರಂದು ಗೋಪಿಶೆಟ್ಟಿಕೊಪ್ಪ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಸೆ.25 ರಂದು ದುರ್ಗಿಗುಡಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಸೆ. 23 ರಂದು ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಸೆ. 22: ನಗರ ಉಪವಿಭಾಗ-2 ರ ಘಟಕ-4 ರ ಕೆಆರ್ ಪುರಂ ಮತ್ತು ಘಟಕ 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಸೆ.23 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗಾಂಧಿ ಬಜಾರ್, ಭರಮಪ್ಪನಗರ, ಉಪ್ಪಾರ ಕೇರಿ, ಕೆ.ಆರ್.ಪುರಂ, ಎಂಕೆಕೆ ರಸ್ತೆ, ಅಜಾದ್‍ನಗರ, ನೂರಾನಿ ಮಸೀದಿ, ಸಿದ್ದಯ್ಯ ರಸ್ತೆ, ಕಲ್ಲಪ್ಪನ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೆ. 24 ರಂದು ಗೋಪಿಶೆಟ್ಟಿಕೊಪ್ಪ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಸೆ. 22: ನಗರ ಉಪವಿಭಾಗ-2 ರ ಘಟಕ-4 ರ ಕೆಆರ್ ಪುರಂ ಮತ್ತು ಘಟಕ 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಸೆ. 24 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗೋಪಿಶೆಟ್ಟಿಕೊಪ್ಪ, ಜಿ.ಎಸ್ ಕ್ಯಾಸ್ಟಿಂಗ್ ಫ್ಯಾಕ್ಟರಿ,

ಸಲೀಂ ಫ್ಯಾಕ್ಟರಿ, ಸಿದ್ದೇಶ್ವರ ಸರ್ಕಲ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹಚ್‍ಬಿ ಕಾಲೋನಿ, ಹಳೇ ಗೋಪಿಶೆಟ್ಟಿಕೊಪ್ಪ, ಮಲ್ಲಿಕಾರ್ಜುನ ಬಡಾವಣೆ, ಅನುಪಿನಕಟ್ಟೆ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೆ. 25 ರಂದು ದುರ್ಗಿಗುಡಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಸೆ. 22 : ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-2 ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಸೆ.25 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಲಗೂರು ಕಾಂಪ್ಲೆಕ್ಸ್, ದುರ್ಗಿಗುಡಿ 1 ನೇ ಮತ್ತು 2 ನೇ ಪ್ಯಾರಲಲ್ ರಸ್ತೆ, ಎಲ್.ಎಲ್.ಆರ್ ರಸ್ತೆಯಿಂದ ಶಿವಮೊಗ್ಗ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

Previous post ಕಾವೇರಿ ಜಲ ವಿವಾದ : ಕೇಂದ್ರ ಜಲ ಶಕ್ತಿ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ – ಸಿಎಂ ಸಿದ್ದರಾಮಯ್ಯ
ಭದ್ರಾ ಜಲಾಶಯ ಆವರಣದಲ್ಲಿ ಶಿವಮೊಗ್ಗ ಜಿಪಂ ಸಿಇಓ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ Next post ಭದ್ರಾ ಜಲಾಶಯ ಆವರಣದಲ್ಲಿ ಶಿವಮೊಗ್ಗ ಜಿಪಂ ಸಿಇಓ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ