ಮನೆಯಿಂದ ಮಗನೊಂದಿಗೆ ಕಣ್ಮರೆಯಾದ ತಾಯಿ..!

ಶಿವಮೊಗ್ಗ, ಫೆ. 8: ತಾಯಿಯೋರ್ವಳು ತನ್ನ ಮಗನೊಂದಿಗೆ ಮನೆಯಿಂದ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದಲ್ಲಿ ನಡೆದಿದೆ.
ಸುಧಾ (28) ಹಾಗೂ ಅವರ ಪುತ್ರ ನಿತಿನ್ (7) ನಾಪತ್ತೆಯಾದವರೆಂದು ಗುರುತಿಸಲಾಗಿದೆ. ತಾಯಿ-ಮಗನ ಕುರಿತಂತೆ ಎಲ್ಲಿಯೂ ಸುಳಿವು ಲಭ್ಯವಾಗದ ಕಾರಣದಿಂದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಚಹರೆ: ಸುಧಾ ಅವರು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೋಲುಮುಖದವರಾಗಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾದ ದಿನದಂದು ಗೋಲ್ಡ್ ಕಲರ್ ಟಾಪ್, ವೈಟ್ ಕಲರ್ ಪ್ಯಾಂಟ್ ಬಟ್ಟೆ ಧರಿಸಿದ್ದರು.
ಅವರ ಪುತ್ರ ನಿತಿನ್ 3.5 ಅಡಿ ಎತ್ತರವಿದ್ದುಎಣ್ಣೆಗಪ್ಪು ಮೈಬಣ್ಣ ಹೊಂದಿದ್ದಾನೆ. ಕಾಣೆಯಾದ ವೇಳೆ ಕೆಂಪು ಟೀ ಶರ್ಟ್, ನೀಲಿ ಚಡ್ಡಿ ಧರಿಸಿದ್ದ. ಇವರ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಶಿವಮೊಗ್ಗ ಕಂಟ್ರೋಲ್ ರೂಂ ಸಂಖ್ಯೆ : 08182-261400, ಕುಂಸಿ ಪೊಲೀಸ್ ಠಾಣೆ ಪಿಐ ಮೊಬೈಲ್ ಸಂಖ್ಯೆ : 9480803351 ಗೆ ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Previous post ರೈಲ್ವೆ ಇಲಾಖೆಯಿಂದ ಜಾಗೃತಿ ಅಭಿಯಾನ
Next post ಸಿಎಂ ಎದುರೇ ಘೋಷಣೆ ಕೂಗಿ ಆಕ್ರೋಶ..!