ಸೆ. 25 ರಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾ ದರ್ಶನ : ಡಿಸಿ ಡಾ. ಆರ್. ಸೆಲ್ವಮಣಿ

ಸೆ. 25 ರಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾ ದರ್ಶನ : ಡಿಸಿ ಡಾ. ಆರ್. ಸೆಲ್ವಮಣಿ

ಶಿವಮೊಗ್ಗ, ಸೆ. 23: ಜಿಲ್ಲೆಯ ಜನರ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರ ನೇತೃತ್ವದಲ್ಲಿ, ಸೆಪ್ಟೆಂಬರ್ 25 ರ ಬೆಳಿಗ್ಗೆ 10.30ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜನತಾದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ನಾಗರೀಕರು ರಾಜಧಾನಿ ಬೆಂಗಳೂರಿಗೆ ಹೋಗಿ ಹಲವಾರು ರೀತಿಯ ಸಮಸ್ಯೆಗಳ ಕುರಿತು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುತ್ತಿರುವುದನ್ನು ನಿಯಂತ್ರಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕ೦ಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನಿರ್ದೇಶನದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ನಡೆಯುವ ದಿನದಂದು ಬೆಳಗ್ಗೆ 9.30ರಿಂದ ನಿಗಪಡಿಸಿದ ಸ್ಥಳದಲ್ಲಿ ಖುದ್ದು ಹಾಜರಿದ್ದು ಸಾರ್ವಜನಿಕರು ಅವಹಾಲುಗಳನ್ನು ಸಲ್ಲಿಸಬಹುದಾಗಿದೆ.

ವೈಯಕ್ತಿಕ ಅಹವಾಲು ಸಲ್ಲಿಸುವವರು ತಮ್ಮ ಅಹವಾಲನ್ನು ತಾವೊಬ್ಬರೇ ಸಲ್ಲಿಸಬಹುದಾಗಿದೆ. ಸಾರ್ವಜನಿಕವಾಗಿ ಅಹವಾಲು ಸಲ್ಲಿಸುವವರು ಗರಿಷ್ಟ ಇಬ್ಬರಿಗೆ ಅವಕಾಶ ನೀಡಲಾಗುವುದು. ಅರ್ಜಿ ನೋಂದಾಯಿಸಿದ ನಂತರ ಟೋಕನ್ ಪಡೆದುಕೊಳ್ಳಬೇಕು. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಕೆಯಾದ ನಂತರ ಉಳಿಕೆಯವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಮನವಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 68 ದೌರ್ಜನ್ಯ ಪ್ರಕರಣ : 39 ಚಾರ್ಜ್‍ಶೀಟ್ - 87.75 ಲಕ್ಷ ರೂ. ಪರಿಹಾರ ಮಂಜೂರು Previous post ಶಿವಮೊಗ್ಗ ಜಿಲ್ಲೆಯಲ್ಲಿ 68 ದೌರ್ಜನ್ಯ ಪ್ರಕರಣ : 39 ಚಾರ್ಜ್‍ಶೀಟ್ – 87.75 ಲಕ್ಷ ರೂ. ಪರಿಹಾರ ಮಂಜೂರು
'ಮಹಿಳಾ ಮೀಸಲಾತಿ ಜಾರಿ ಆಗುವುದೇ ಅನುಮಾನ' : ಸಿಎಂ ಸಿದ್ದರಾಮಯ್ಯ Next post ‘ಮಹಿಳಾ ಮೀಸಲಾತಿ ಜಾರಿ ಆಗುವುದೇ ಅನುಮಾನ’ : ಸಿಎಂ ಸಿದ್ದರಾಮಯ್ಯ