ಸಿಎಂ ಎದುರೇ ಘೋಷಣೆ ಕೂಗಿ ಆಕ್ರೋಶ..!

ಶಿವಮೊಗ್ಗ, ಫೆ.8: ಶಿವಮೊಗ್ಗ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರ ಅಹವಾಲು ಆಲಿಸಿದರು.

ಮುಖಂಡ ತೀ.ನಾ.ಶ್ರೀನಿವಾಸ್ ನೇತೃತ್ವದ ಮಲೆನಾಡು ರೈತ ಹೋರಾಟ ಸಮಿತಿಯು, ಜಿಲ್ಲೆಯ ಬಗರ್ ಹುಕುಂ ರೈತರ ಸಮಸ್ಯೆ ಪರಿಹಾರದ ಕುರಿತಂತೆ ಸಿಎಂಗೆ ಮನವಿ ಪತ್ರ ಅರ್ಪಿಸಿತು.

ಈ ವೇಳೆ ಅರಣ್ಯ ಇಲಾಖೆಯು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಸಿಎಂ ಎದುರೇ ಅರಣ್ಯ ಇಲಾಖೆ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಯತ್ನ: ಕಳೆದ ಎರಡು ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕು ಹುಣಸೋಡು ಬಳಿ ಸಂಭವಿಸಿದ ಸ್ಪೋಟದ ವೇಳೆ, ಮನೆಗಳ ಗೋಡೆ ಬಿರುಕು ಬಿಟ್ಟವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ, ನವ ಕರ್ನಾಟಕ ನಿರ್ಮಾಣ ವೇದಿಕೆ ಮುಖಂಡರು ಸಿಎಂಗೆ ಮನವಿ ಅರ್ಪಿಸಲು ಆಗಮಿಸಿದ್ದರು.

ಸಿಎಂ ಮನವಿ ಸ್ವೀಕರಿಸದಿದ್ದರಿಂದ ಆಕ್ರೋಶಗೊಂಡ ಮುಖಂಡರು ಘೋಷಣೆ ಕೂಗಿ ಪ್ರತಿಭಟನೆಗೆ ಯತ್ನಿಸಿದ ಘಟನೆ ನಡೆಯಿತು. ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಮುಖಂಡರನ್ನು ವಶಕ್ಕೆ ಪಡೆದು ಕರೆದೊಯ್ದರು.

Previous post ಮನೆಯಿಂದ ಮಗನೊಂದಿಗೆ ಕಣ್ಮರೆಯಾದ ತಾಯಿ..!
Next post ಬಿ.ಎಸ್ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪರ ಗುಣಗಾನ ಮಾಡಿದ ಮುಖ್ಯಮಂತ್ರಿ!