ಅವ್ಯಾಚ್ಯ ಶಬ್ದ : ವ್ಯಕ್ತಿಯ ಜೊತೆ ರಸ್ತೆಯಲ್ಲಿಯೇ ಜಗಳಕ್ಕಿಳಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ..! *ಶಿವಮೊಗ್ಗ ನಗರದ ಪುರಲೆ ಬಡಾವಣೆಯಲ್ಲಿ ನಡೆದ ಘಟನೆ

ಅವ್ಯಾಚ್ಯ ಶಬ್ದ : ವ್ಯಕ್ತಿಯ ಜೊತೆ ರಸ್ತೆಯಲ್ಲಿಯೇ ಜಗಳಕ್ಕಿಳಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ..!

ಶಿವಮೊಗ್ಗ, ಸೆ. 26: ಅವ್ಯಾಚ್ಯ ಶಬ್ದ ಪ್ರಯೋಗಿಸಿದ ನಾಗರೀಕರೋರ್ವರ ಮಾತಿಗೆ ಗರಂ ಆದ ಶಾಸಕ ಚನ್ನಬಸಪ್ಪರವರು, ರಸ್ತೆಯಲ್ಲಿಯೇ ಮಾತಿನ ಚಕಮಕಿ ನಡೆಸಿ ಜಗಳಕ್ಕಿಳಿದ ಘಟನೆ ಶಿವಮೊಗ್ಗ ಮಹಾನಗರ ಪಾಲಿಕೆ 5 ನೇ ವಾರ್ಡ್ ಪುರಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪುರಲೆ ಬಡಾವಣೆಗೆ ಶಾಸಕರು ಆಗಮಿಸಿದ್ದರು. ಈ ವೇಳೆ ಸ್ಥಳೀಯ ನಿವಾಸಿಗಳು ಏರಿಯಾದಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಚರಂಡಿಗಳ ಸ್ವಚ್ಛತೆಯಿಲ್ಲ. ಯುಜಿಡಿ ಅವ್ಯವಸ್ಥೆಯಿದೆ ಎಂಬಿತ್ಯಾದಿ ದೂರುಗಳ ಸರಮಾಲೆಯನ್ನೇ ಶಾಸಕರ ಮುಂದಿಟ್ಟಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ಆದ ಮೇಯರ್ ಶಿವಕುಮಾರ್ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶಾಸಕರ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಗಳ ವೀಕ್ಷಣೆಗೆ ಶಾಸಕರು ನಿವಾಸಿಗಳ ಜೊತೆ ಹೋಗುತ್ತಿದ್ದ ವೇಳೆ, ವ್ಯಕ್ತಿಯೋರ್ವರು ಅವ್ಯಾಚ್ಯ ಶಬ್ದ ಪ್ರಯೋಗ ಮಾಡಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

ಇದರಿಂದ ಸಿಟ್ಟಾದ ಶಾಸಕರು, ಏರು ಧ್ವನಿಯಲ್ಲಿ ಸದರಿ ವ್ಯಕ್ತಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ‘ನನ್ನ ಹತ್ತಿರ ಸರಿಯಾಗಿ ಮಾತನಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಗರಂ ಆಗಿದ್ದಾರೆ.

ಸದರಿ ವ್ಯಕ್ತಿಯು ಕೂಡ ಶಾಸಕರ ಜೊತೆ ಏರು ಧ್ವನಿಯಲ್ಲಿ ಪ್ರತ್ಯುತ್ತರ ನೀಡಲಾರಂಭಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಇದರಿಂದ ಸ್ಥಳದಲ್ಲಿ ಕೆಲ ಸಮಯ ಕಾವೇರಿದ ವಾತಾವರಣ ಸೃಷ್ಟಿಯಾಗಿದೆ.

ತಕ್ಷಣವೇ ಸ್ಥಳದಲ್ಲಿದ್ದವರು ಶಾಸಕರನ್ನು ಸಮಾಧಾನಪಡಿಸಿದ್ದಾರೆ. ಜೊತೆಗೆ ಸದರಿ ವ್ಯಕ್ತಿಯನ್ನು ಅಲ್ಲಿಂದ ಬೇರೆಡೆ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸುವ ಕಾರ್ಯ ನಡೆಸಿದ್ದಾರೆ.

ಮೇಯರ್ ವಿರುದ್ದ ದೂರುಗಳ ಸರಮಾಲೆ!

*** ‘ವಾರ್ಡ್ ಕಾರ್ಪೋರೇಟರ್ ಆದ ಮೇಯರ್ ಶಿವಕುಮಾರ್ ಅವರು ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಶಾಸಕ ಚನ್ನಬಸಪ್ಪ ಎದುರು ದೂರುಗಳ ಸುರಿಮಳೆಗೈದಿದ್ದಾರೆ!

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಶಿವಮೊಗ್ಗದಲ್ಲಿ ಸೆ. 28 ರಂದು ವಾಹನಗಳ ಸಂಚಾರ ಮಾರ್ಗ ಬದಲಾವಣೆ Previous post ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಶಿವಮೊಗ್ಗದಲ್ಲಿ ಸೆ. 28 ರಂದು ವಾಹನಗಳ ಸಂಚಾರ ಮಾರ್ಗ ಬದಲಾವಣೆ
ಸೆ. 27 – 28 ರಂದು ಶಿವಮೊಗ್ಗ ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಶಿವಮೊಗ್ಗ ತಾಲೂಕು ಗಾಜನೂರಿನ ನವೋದಯ 9 ಹಾಗೂ 11 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ ನವೋದಯ 11 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ Next post ಸೆ. 27 – 28 ರಂದು ಶಿವಮೊಗ್ಗ ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ