
2000 ರೂ. ನೋಟು ಬದಲಾವಣೆ : ಸಮೀಪಿಸುತ್ತಿರುವ ಸೆ. 30 ರ ಗಡುವು!
ನವದೆಹಲಿ, ಸೆ. 27: ಕಳೆದ ಮೇ 19 ರಂದು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು, ಚಲಾವಣೆಯಿಂದ ಹಿಂಪಡೆಯುವ ಘೋಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಮಾಡಿತ್ತು. ನೋಟುಗಳನ್ನು ಹಿಂದಿರುಗಿಸಲು 2023 ರ ಸೆಪ್ಟೆಂಬರ್ 30 ರವರೆಗೆ ಅವಕಾಶ ಕಲ್ಪಿಸಿತ್ತು. ಇದೀಗ ಗಡುವಿನ ಅವಧಿ ಸಮೀಪಿಸುತ್ತಿದೆ.
ಚಲಾವಣೆಯಿಂದ ಹಿಂಪಡೆಯುವ ಘೋಷಣೆ ಮಾಡಿದ ನಂತರ, ಸಾರ್ವಜನಿಕರು ತಮ್ಮ ಬಳಿಯಿರುವ 2000 ರೂ. ನೋಟ್ ಗಳನ್ನು ಬ್ಯಾಂಕ್ ನ ಉಳಿತಾಯ ಖಾತೆಗೆ ಜಮೆ ಮಾಡಲು ಅಥವಾ ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಲು ಆರ್.ಬಿ.ಐ. ಅವಕಾಶ ಕಲ್ಪಿಸಿತ್ತು. ಸೆ. 1 ರಂದು ಆರ್.ಬಿ.ಐ ನೀಡಿದ ಮಾಹಿತಿ ಅನುಸಾರ, ಈಗಾಗಲೇ ಶೇ. 93 ರಷ್ಟು 2000 ರೂ. ಮುಖಬೆಲೆಯ ನೋಟುಗಳು ಬ್ಯಾಂಕ್ ಗಳಿಗೆ ವಾಪಾಸ್ ಬಂದಿವೆ ಎಂದು ಹೇಳಿತ್ತು.
ನೋಟುಗಳನ್ನು ಹಿಂದಿರುಗಿಸಲು ಪ್ರಸ್ತುತ ನೀಡಲಾಗಿರುಬ ಗಡುವು ಅವಧಿ ವಿಸ್ತರಣೆಯಾಗಲಿದೆಯೇ? ಅಥವಾ ಇಲ್ಲವೇ? ಎಂಬುವುದರ ಬಗ್ಗೆ ಇಲ್ಲಿಯವರೆಗೂ ಆರ್.ಬಿ.ಐ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಮೂಲಗಳ ಪ್ರಕಾರ ಗಡುವು ಅವಧಿ ವಿಸ್ತರಣೆಯಾಗುವ ಸಾಧ್ಯತೆಗಳು ವಿರಳ ಎಂದು ಹೇಳಲಾಗುತ್ತಿದೆ.
2016 ರ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿತ್ತು. ನೋಟ್ ಬ್ಯಾನ್ ನಂತರ 500 ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಚಲಾವಣೆ ಜಾರಿಗೊಳಿಸಿತ್ತು.
More Stories
ಶಿವಮೊಗ್ಗದಲ್ಲಿ ಮ್ಯಾರಥಾನ್ ಓಟ ಆಯೋಜನೆ
ಶಿವಮೊಗ್ಗ, ಆ. 14: ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಿಂದ ಇಂದು ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು. ಯುವಸಬಲೀಕರಣ...