
ಶಿವಮೊಗ್ಗ ನಗರದ ವಿವಿಧೆಡೆ ಫೆ.10 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಫೆ. 8: ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಎಫ್-8 ರಲ್ಲಿ ಫೆ. 10 ರಂದು ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆವರೆಗೆ ನಗರದ ಹುಚ್ಚುರಾಯ ಕಾಲೋನಿ, ಕುವೆಂಪು ಬಡಾವಣೆ, ಲಕ್ಷ್ಮೀಪುರ, ಎನ್.ಎಂ.ಸಿ. ಕಾಂಪೌಂಡ್ ಹತ್ತಿರ,
ವಿಜಯ ಅವೆನ್ಯೂ, ಕಾಶೀಪುರ, ಕೆಂಚಪ್ಪ ಲೇಔಟ್, ದಯಾನಂದ ಪ್ರಿಂಟರ್ಸ್, ವಿಪ್ರ ಟ್ರಸ್ಟ್,
ಎಸ್.ಆರ್.ಎಸ್. ಶಾಮೀಯಾನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.