ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶಿವಮೊಗ್ಗದ ಡಾ.ಆರ್.ಎಸ್.ವರುಣ್ ಕುಮಾರ್
ಶಿವಮೊಗ್ಗ, ಅ. 5: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಸಿದ್ದಪಡಿಸಿದ ಪಟ್ಟಿಯಲ್ಲಿ ಶಿವಮೊಗ್ಗದ ರಾಮನಹಳ್ಳಿಯ ಡಾ.ಆರ್.ಎಸ್. ವರುಣ್‌ಕುಮಾರ್ ಸ್ಥಾನ ಪಡೆದಿದ್ದಾರೆ.
ದಾವಣಗೆರೆ ವಿವಿಯ ಪ್ರೊ. ಬಿ.ಸಿ ಪ್ರಸನ್ನ ಕುಮಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾರ್ಥಿಯಾದ ಡಾ.ಆರ್.ಎಸ್.ವರುಣ್‌ಕುಮಾರ್ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 202೨ ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪತ್ರಕರ್ತರು, ಲೇಖಕರಾದ ಎನ್.ರವಿಕುಮಾರ್ (ಟೆಲೆಕ್ಸ್ ರವಿ) ಮತ್ತು ಶಶಿಕಲಾ ದಂಪತಿಯ ಪುತ್ರರಾದ ಡಾ.ಆರ್.ಎಸ್.ವರುಣ್‌ಕುಮಾರ್ ಗಣಿತಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ.