ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 20 ರಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಶಿಕ್ಷಕರ ಸಂಘದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಶಿವಮೊಗ್ಗ, ಅ. 6: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅ.20 ರಿಂದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘವು ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ, ವೃಂದ ಮತ್ತು ನೇಮಕಾತಿ  ನಿಯಮಗಳು ಪರಿಷ್ಕರಣೆಯಾಗಿ 12 ವರ್ಷಗಳಾಗಿವೆ. ಸದರಿ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ, 2016 ರಲ್ಲಿ ನೇಮಕವಾದ ಎಸ್.ಡಿ.ಎ – ಎಫ್.ಡಿ.ಎ – ವಾರ್ಡನ್ ಗಳಿಗೆ 2011 ರಲ್ಲಿ ಮುಂಬಡ್ತಿ ಆದೇಶ ನೀಡಲಾಗಿದೆ ಎಂದು ಸಂಘಟನೆ ದೂರಿದೆ.

ಇಲಾಖೆಯು ಶಿಕ್ಷಕರ ಸಮಸ್ಯೆ ಪರಿಹರಿಸುವುದಾಗಿ ಹೇಳಿ, ಶಿಕ್ಷಕರ ಸಂಘದ ಸಭೆ ನಡೆಸಿ ಭರವಸೆ ನೀಡಿದೆ. ಆದರೆ ಭರವಸೆಗಳು ಈಡೇರದ ಕಾರಣದಿಂದ 17-7-2023 ರಂದು ರಾಜ್ಯ ಮಟ್ಟದ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗಿತ್ತು. ಇಲಾಖೆ ಮೇಲಾಧಿಕಾರಿಗಳು ಧರಣಿ ಸಭೆಗೆ ಆಗಮಿಸಿ ನೀಡಿದ್ದ ಭರವಸೆಗಳು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲವಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಬೇಡಿಕೆಗಳು : ವೇತನ ತಾರತಮ್ಯ ಪರಿಹರಿಸಬೇಕು. ಶಿಕ್ಷಕರಿಗೆ ಅನ್ವಯವಾಗುವಂತೆ ಅಂತಿಮ ಸಂಯೋಜಿತ ಪದಕ್ರಮ ಪಟ್ಟಿ  ಬಿಡುಗಡೆಗೊಳಿಸಬೇಕು. ನವೋದಯ ಮಾದರಿ  ಶಾಲೆಯ ಸ್ನಾತಕೋತರ ಪದವೀಧರ ಶಿಕ್ಷಕರ ವೇತನ ತಾರತಮ್ಯ ನಿವಾರಿಸಬೇಕು.

ದೈಹಿಕ ಶಿಕ್ಷಕರಿಗೆ ಉನ್ನತಿಕರಿಸಿದ ಶಾಲೆಗಳಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿಗೆ ಅವಕಾಶ ನೀಡಬೇಕು. ಆರ್ಟ್, ಕ್ರಾಪ್ಟ್ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಿಗೆ ನೀಡುವ ವೇತನಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಬೇಕು.

ಎಂಓಡಿ ರದ್ದಾಗಬೇಕು. ಉನ್ನತಿಕರಿಸಿದ ಶಾಲೆಯ ಹೆಚ್ಚುವರಿ ಕಾರ್ಯಭಾರವನ್ನು ತೆರವುಗೊಳಿಸಬೇಕು. ಎಲ್ಲ ವೃಂದದ ನೌಕರರಿಗೂ ಅನುಕೂಲವಾಗುವ ರೀತಿಯಲ್ಲಿ ನೌಕರರ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

Previous post ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶಿವಮೊಗ್ಗದ ಡಾ.ಆರ್‌.ಎಸ್‌.ವರುಣ್‌ ಕುಮಾರ್‌
Next post ರಾಷ್ಟ್ರಮಟ್ಟದ ಇನ್‍ಸ್ಪೈರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾದ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿನಿಯರು