ಶಿವಮೊಗ್ಗ : ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಮುಂದುವರಿಕೆ – ನಗರದ ಇತರೆಡೆ ತೆರವು!

ಶಿವಮೊಗ್ಗ, ಅ. 8: ಶಿವಮೊಗ್ಗ ನಗರದ ರಾಗಿಗುಡ್ಡ (ಶಾಂತಿನಗರ) ಹೊರತುಪಡಿಸಿ, ಪಾಲಿಕೆ ವ್ಯಾಪ್ತಿಯ ಇತರೆಡೆ ವಿಧಿಸಲಾಗಿದ್ದ ಸಿ.ಆರ್.ಪಿ.ಸಿ ಕಲಂ 144 ರ ನಿಷೇಧಾಜ್ಞೆ ತೆರವುಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಭಾನುವಾರ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿರುವುದರಿಂದ ಭಾನುವಾರದಿಂದ ರಾಗಿಗುಡ್ಡ ಹೊರತುಪಡಿಸಿ, ಪಾಲಿಕೆ ವ್ಯಾಪ್ತಿಯ ಇತರೆಡೆ ನಿಷೇಧಾಜ್ಞೆ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅ. 1 ರಂದು ರಾಗಿಗುಡ್ಡ ಬಡಾವಣೆಯಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ, ಅಂದು ಮಧ್ಯರಾತ್ರಿ 12 ಗಂಟೆಯಿಂದ ರಾಗಿಗುಡ್ಡ ಸೇರಿದಂತೆ ಶಿವಮೊಗ್ಗ ನಗರಾದ್ಯಂತ ಸಿ.ಆರ್.ಪಿ.ಸಿ ಕಲಂ 144 ರ ಅನ್ವಯ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿತ್ತು.

Previous post ಅತ್ತಿಬೆಲೆ ಅಗ್ನಿ ದುರಂತ ಸಿಐಡಿ ತನಿಖೆಗೆ ಆದೇಶ – ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರ : ಸಿಎಂ ಸಿದ್ದರಾಮಯ್ಯ
Next post ತೀವ್ರ ಬರಗಾಲ – ನೀರಿಲ್ಲದೆ ಒಣಗುತ್ತಿರುವ ಬೆಳೆಗಳು : ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು!