
ಫ್ಲೈ ಓವರ್ ಕಾಮಗಾರಿ : ಲಾರಿ, ಬಸ್ ಸಂಚಾರಕ್ಕೆ ನಿರ್ಬಂಧ!
ಶಿವಮೊಗ್ಗ, ಫೆ. 8: ಶಿವಮೊಗ್ಗ ನಗರದ ಹುಚ್ಚುರಾಯ ಕಾಲೋನಿ ಸಮೀಪದ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಈ ನಡುವೆ ಪ್ರಮುಖ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಕಾಮಗಾರಿ ಸ್ಥಳದ ಬಳಿಯ ರಸ್ತೆ ಮೂಲಕ ಬಸ್, ಲಾರಿ ಹಾಗೂ ಭಾರೀ ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ಫೆ.8 ರ ರಾತ್ರಿಯಿಂದ ಫೆ. 10 ರ ಬೆಳಿಗ್ಗೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ಈ ಸಂಬಂಧ ರಾಜ್ಯ ಹೆದ್ದಾರಿಯ ಹಲವೆಡೆ ಪ್ರಕಟಣೆಯ ಫ್ಲೆಕ್ಸ್ ಗಳನ್ನು ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯವನ್ನು ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಮಾಡಿದೆ.