ಕೊನೆಗೂ ಸಂಚಾರಕ್ಕೆ ಸಿದ್ದವಾದ ಶಿವಮೊಗ್ಗದ ಕಾಶೀಪುರ ರೈಲ್ವೆ ಮೇಲ್ಸೇತುವೆ!

ಕೊನೆಗೂ ಸಂಚಾರಕ್ಕೆ ಸಿದ್ದವಾದ ಶಿವಮೊಗ್ಗದ ಕಾಶೀಪುರ ರೈಲ್ವೆ ಮೇಲ್ಸೇತುವೆ!

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಅ. 9: ಅಂತೂ ಇಂತೂ ಕೊನೆಗೂ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿದ್ದ, ರೈಲ್ವೆ ಫ್ಲೈ ಓವರ್ (ಮೇಲ್ಸೇತುವೆ) ಕಾಮಗಾರಿ ಪೂರ್ಣ ಹಂತಕ್ಕೆ ಬಂದಿದೆ. ಈಗಾಗಲೇ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ನಾಗರೀಕರು ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಕೆಲ ದಿನಗಳಿಂದ ಮೇಲ್ಸೇತುವೆಯ ಎರಡು ಬದಿ ಬಾಕಿಯಿದ್ದ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಅಂತಿಮ ಘಟ್ಟಕ್ಕೆ ಬರಲಾರಂಭಿಸಿದೆ. ಈಗಾಗಲೇ ಫ್ಲೈ ಓವರ್ ನ ಎಲೆಕ್ಟ್ರಿಕಲ್, ಫ್ಲಂಬಿಂಗ್, ಸೂಚನಾ ಫಲಕ ಅಳವಡಿಕೆ, ಫುಟ್’ಪಾತ್ ನಿರ್ಮಾಣ, ಟೈಲ್ಸ್ ಅಳವಡಿಕೆ ಸೇರಿದಂತೆ ಸಣ್ಣಪುಟ್ಟ ಕೆಲಸ ಕಾರ್ಯಗಳು ಪೂರ್ಣಗೊಂಡಿದೆ.

ಕೊನೆಗೂ ಸಂಚಾರಕ್ಕೆ ಸಿದ್ದವಾದ ಶಿವಮೊಗ್ಗದ ಕಾಶೀಪುರ ರೈಲ್ವೆ ಮೇಲ್ಸೇತುವೆ!

ಹಾಗೆಯೇ ಫ್ಲೈ ಓವರ್ ರಸ್ತೆಯ ಎರಡು ಬದಿ ಎಲ್ಇಡಿ ಸ್ಟ್ರೀಟ್ ಲೈಟ್ ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಬೆಳಕಿನಿಂದ ಫ್ಲೈ ಓವರ್ ಝಗಮಗಿಸುತ್ತಿದೆ. ಸಂಜೆಯ ವೇಳೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು, ಫ್ಲೈ ಓವರ್ ವೀಕ್ಷಣೆಗೆ ಆಗಮಿಸುತ್ತಿದ್ದು ಸದ್ಯ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿತವಾಗಿದೆ.

‘ಕಳೆದ ಎರಡೂವರೆ ವರ್ಷಗಳಿಂದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿತ್ತು. ಆದರೆ ಕೊರೊನಾ ಮತ್ತೀತರ ಕಾರಣಗಳಿಂದ ಕಾಮಗಾರಿ ವಿಳಂಬಗತಿಯಲ್ಲಿ ಸಾಗಿತ್ತು. ಫ್ಲೈ ಓವರ್ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ರೈಲು ಸಂಚಾರದ ವೇಳೆಯಲ್ಲಂತೂ ಭಾರೀ ದೊಡ್ಡ ಪ್ರಮಾಣದ ಟ್ರಾಫಿಕ್ ಜಾಮ್ ಏರ್ಪಡುತ್ತಿತ್ತು.

ಸುತ್ತಮುತ್ತಲಿನ ಸಣ್ಣಪುಟ್ಟ ರಸ್ತೆಗಳು ಭಾರೀ ವಾಹನಗಳ ಸಂಚಾರದಿಂದ ಹಾಳಾಗಿದ್ದವು. ಇದೀಗ ಫ್ಲೈ ಓವರ್ ಕಾಮಗಾರಿ ಪೂರ್ಣ ಹಂತಕ್ಕೆ ಬಂದಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಸಾಕಷ್ಟು ಅನುಕೂಲವಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಡುತ್ತಾರೆ.

ಕೊನೆಗೂ ಸಂಚಾರಕ್ಕೆ ಸಿದ್ದವಾದ ಶಿವಮೊಗ್ಗದ ಕಾಶೀಪುರ ರೈಲ್ವೆ ಮೇಲ್ಸೇತುವೆ!

ನಿರ್ಮಾಣ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಫ್ಲೈ ಓವರ್ ನಿರ್ಮಿಸಲಾಗುತ್ತಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಪ್ರಯತ್ನದ ಫಲದಿಂದ ಕಾಶೀಪುರ ರೈಲ್ವೆ  ಗೇಟ್ ನಲ್ಲಿ ಫ್ಲೈ ಓವರ್ ನಿರ್ಮಾಣವಾಗುವಂತಾಗಿದೆ.

ಕೋಟೆಗಂಗೂರು ಗ್ರಾಮದಲ್ಲಿ ಕೋಚಿಂಗ್ ಡಿಫೋ ನಿರ್ಮಿಸಲಾಗುತ್ತಿದೆ. ಇದರ ಕಾರ್ಯಾರಂಭದ ನಂತರ ರೈಲುಗಳ ಓಡಾಟ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಇದೇ ಮಾರ್ಗದಲ್ಲಿ ಬರುವ ಕಾಶೀಪುರ ರೈಲ್ವೆ ಗೇಟ್ ನಲ್ಲಿ ಮೇಲ್ಸೇತುವೆ ನಿರ್ಮಾಣದಿಂದ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲು ನಾಗರೀಕರ ಆಗ್ರಹ

*** ಫ್ಲೈ ಓವರ್ ನಿರ್ಮಾಣದ ವೇಳೆ ದೇವರಾಜ ಅರಸ್ ಬಡಾವಣೆ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣ ಸಾಮಗ್ರಿಗಳನ್ನಿಡಲಾಗಿತ್ತು. ಚೌಡಮ್ಮ ದೇವಾಲಯದವರೆಗಿನ ರಸ್ತೆಯ ಒಂದು ಬದಿ ಗುಂಡಿ –  ಗೊಟರು ಬಿದ್ದಿದೆ. ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈಗಾಗಲೇ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭವಾಗಿದೆ. ಈ ಕಾರಣದಿಂದ ರೈಲ್ವೆ ಇಲಾಖೆಯಿಂದಲೇ  ಹಾಳಾಗಿರುವ ಹೆದ್ದಾರಿ ದುರಸ್ತಿಗೆ ಪಿಡಬ್ಲ್ಯೂಡಿ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು

Previous post ತೀವ್ರ ಬರಗಾಲ – ನೀರಿಲ್ಲದೆ ಒಣಗುತ್ತಿರುವ ಬೆಳೆಗಳು : ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು!
Next post ಅತ್ತಿಬೆಲೆ ಪಟಾಕಿ ದುರಂತ : ತಹಶೀಲ್ದಾರ್, ಇನ್ಸ್ ಪೆಕ್ಟರ್, ಅಗ್ನಿಶಾಮಕ ದಳದ ಅಧಿಕಾರಿ ಸಸ್ಪೆಂಡ್ ಗೆ ಮುಖ್ಯಮಂತ್ರಿ ಸೂಚನೆ!