ಶಿವಮೊಗ್ಗ ನಗರದ ವಿವಿಧೆಡೆ ಅ. 12, 13 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ
ಶಿವಮೊಗ್ಗ, ಅ. 12: ಶಿವಮೊಗ್ಗ ನಗರದ ನೀರು ಶುದ್ದೀಕರಣ ಕೇಂದ್ರದಲ್ಲಿನ ಕೊಳವೆ ಮಾರ್ಗದಲ್ಲಿ, ತುರ್ತು ದುರಸ್ಥಿ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಅ. 12 ಮತ್ತು 13 ರಂದು ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿ ಎಂದು ಜಲ ಮಂಡಳಿ ತಿಳಿಸಿದೆ.
ನಗರದ ಮಿಳಘಟ್ಟ, ತುಂಗಾನಗರ, ಪಿ.ಡಬ್ಲ್ಯೂಡಿ ಟ್ಯಾಂಕ್ (ಮಾರ್ನಮಿಬೈಲ್), ಜಿಲ್ಲಾ ಪಂಚಾಯತ್ ಕಚೇರಿ ಎದರು, ರವೀಂದ್ರನಗರ, ಸ್ಟೇಡಿಯಂ ಟ್ಯಾಂಕ್, ಶಿವಮೂರ್ತಿ ಸರ್ಕಲ್ ಟ್ಯಾಂಕ್‍ಗಳಿಗೆ ಹೊಂದಿಕೊಂಡಿರುವ ಬಡಾವಣೆಗಳಿಗೆ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಜಲ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Previous post
ಶಿವಮೊಗ್ಗ ಜಿಲ್ಲೆಯ ಪಟಾಕಿ ಅಂಗಡಿ – ಗೋಡೌನ್ ಗಳ ಮೇಲೆ ದಿಢೀರ್ ದಾಳಿ : 2000 ಕೆ.ಜಿ. ತೂಕದ ಪಟಾಕಿ ವಶ!