
ಶಿಕಾರಿಪುರ ಜೆಡಿಎಸ್ ಪಕ್ಷಕ್ಕೆ ನೇಮಕ
ಶಿಕಾರಿಪುರ, ಫೆ.9: ಶಿಕಾರಿಪುರ ತಾಲೂಕು ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷರಾಗಿ ಬೆಂಕಿ ಯೋಗೇಶ್ ಅವರನ್ನು ಹಾಗೂ ಯುವ ಘಟಕದ ಅಧ್ಯಕ್ಷರನ್ನಾಗಿ ಚಿನ್ಮಯ್ ಚಂದ್ರ ಅವರನ್ನು ನೇಮಿಸಿ ಪಕ್ಷದ ವರಿಷ್ಠರು ಆದೇಶ ಹೂರಡಿಸಿದ್ದಾರೆ. ಈ ಇಬ್ಬರು ಮುಖಂಡರಿಗೆ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.