ಪತ್ತೆಯಾಗದ ವಾರಸುದಾರರು : ಅನಾಮಧೇಯ ಮೃತದೇಹದ ಶವ ಸಂಸ್ಕಾರ ನಡೆಸಿದ ಪೊಲೀಸರು

ಶಿವಮೊಗ್ಗ, ಅ. 25: ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ, ಪೊಲೀಸರೇ ಮುಂದೆ ನಿಂತು ಅನಾಮಧೇಯ ಮೃತದೇಹದ ಶವ ಸಂಸ್ಕಾರ ನಡೆಸಿದ ಘಟನೆ ಬುಧವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.

12-10-2023 ರಂದು ಹೊಳೆ ಬಸ್ ನಿಲ್ದಾಣ ಸಮೀಪದ ಪುಟ್’ಪಾತ್ ಬಳಿ ಸುಮಾರು 50 ರಿಂದ 55 ವರ್ಷ ವಯೋಮಾನದ ಅನಾಮಧೇಯ ಪುರುಷರೋರ್ವರ ಶವ ಪತ್ತೆಯಾಗಿತ್ತು.

ಮೃತ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ತಿಳಿದುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೃತ ದೇಹವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು.

ಪೊಲೀಸರ ತನಿಖೆ ವೇಳೆಯು ಮೃತರ ಪೂರ್ವಾಪರ ಹಾಗೂ ವಾರಸುದಾರರ ಮಾಹಿತಿ ತಿಳಿದುಬಂದಿರಲಿಲ್ಲ. ಈ ಕಾರಣದಿಂದ ಕೋಟೆ ಪೊಲೀಸ್ ಠಾಣೆ ಪಿಎಸ್ಐ ಕುಮಾರ್ ಮತ್ತವರ ಸಿಬ್ಬಂದಿಗಳು ಇಂದು ನಗರದ ನ್ಯೂ ಮಂಡ್ಲಿ ಸ್ಮಶಾನದಲ್ಲಿ ಮೃತ ದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

Previous post ‘ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಖಳನಾಯಕ’ : ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ!
Next post ಶಿವಮೊಗ್ಗ, ಮೈಸೂರು, ತುಮಕೂರು ಪಾಲಿಕೆಗಳಿಗೆ ನಿಗದಿತ ಅವಧಿಯಲ್ಲಿ ನಡೆಯಲಿದೆಯೇ ಚುನಾವಣೆ?