ರೈಲಿನಿಂದ ಕೆಳಕ್ಕೆ ಬಿದ್ದು ಅಪರಿಚಿತ ಯುವಕ ಸಾವು!

ಶಿವಮೊಗ್ಗ, ಅ. 25 : ಚಲಿಸುವ ರೈಲಿನಿಂದ ಯುವಕನೋರ್ವ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ, ಶಿವಪುರ – ಬೀರೂರು ರೈಲು ನಿಲ್ದಾಣಗಳ ನಡುವಿನ ಪ್ರದೇಶದಲ್ಲಿ ಅ. 25 ರಂದು ನಡೆದಿದೆ.

ಕಿ.ಮೀ ಸಂಖ್ಯೆ 02-900-03/000 ರಲ್ಲಿ ದುರಂತ ಸಂಭವಿಸಿದೆ. ಮೃತನಿಗೆ ಸುಮಾರು 22 ವರ್ಷ ವಯಸ್ಸಿದೆ. ರೈಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಚಿಕಿತ್ಸೆಗಾಗಿ ಬೀರೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ.

ಮೃತನು ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಕೂದಲಿದೆ.

ಸುಮಾರು 1 ಇಂಚು ಉದ್ದದ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್, ಆಕಾಶ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಶವವನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ.

ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹದು ಎಂದು ರೈಲ್ವೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ರೈಲಿಗೆ ಸಿಲುಕಿ ಅನಾಮಧೇಯ ಪುರುಷ ಸಾವು!

ಶಿವಮೊಗ್ಗ, ಅ. 26: ಚಲಿಸುವ ರೈಲಿಗೆ ಸಿಲುಕಿ ಅನಾಮಧೇಯ ಪುರುಷ ಮೃತಪಟ್ಟ ಘಟನೆ ಶಿವಮೊಗ್ಗದ ವಿದ್ಯಾನಗರ ಸಮೀಪ ಅ. 25 ರಂದು ನಡೆದಿದೆ.

ಭದ್ರಾವತಿಯಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ರೈಲು ಗಾಡಿ ಸಂಖ್ಯೆ – 20651 ಕ್ಕೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾನೆ. ಕಿ.ಮೀ  59/700-800 ರಲ್ಲಿ ಈ ದುರಂತ ಸಂಭವಿಸಿದೆ.

ಮೃತ ವ್ಯಕ್ತಿಗೆ ಸುಮಾರು 45 ವರ್ಷ ವಯೋಮಾನವಿದೆ. 4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಅರ್ಧ ಇಂಚು ಕಪ್ಪು ಮೀಸೆ ಇರುತ್ತದೆ.

ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಅದರ ಮೇಲೆ ಪ್ಲಸ್ ಆಕಾರದ ನೀಲಿ ಕಲರ್‍ನ ಗೆರೆ ಇರುತ್ತದೆ. ಬಿಳಿ ಬಣ್ಣದ ಕ್ರಾಸ್ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ.

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹದು ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Previous post ಶಿವಮೊಗ್ಗ, ಮೈಸೂರು, ತುಮಕೂರು ಪಾಲಿಕೆಗಳಿಗೆ ನಿಗದಿತ ಅವಧಿಯಲ್ಲಿ ನಡೆಯಲಿದೆಯೇ ಚುನಾವಣೆ?
Next post ಚಿಕ್ಕಬಳ್ಳಾಪುರ – ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ : 13 ಮಂದಿ ಸಾವು!