‘ನಾವಿಕ’ ದಿನಪತ್ರಿಕೆಗೆ ಪ್ರತಿಷ್ಠಿತ ‘ಆಂದೋಲನ ಪ್ರಶಸ್ತಿ’ ಗೌರವ

ಶಿವಮೊಗ್ಗ, ಫೆ. 9: ಶಿವಮೊಗ್ಗ ನಗರದಿಂದ ಪ್ರಕಟವಾಗುವ ‘ನಾವಿಕ’ ದಿನಪತ್ರಿಕೆಯು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ‘ಆಂದೋಲನ ಪ್ರಶಸ್ತಿ’ ಗೌರವಕ್ಕೆ ಪಾತ್ರವಾಗಿದೆ.
ಅತ್ಯುತ್ತಮ ಜಿಲ್ಲಾ ಮಟ್ಟದ ಪತ್ರಿಕೆ ವಿಭಾಗದಡಿ, ಅಕಾಡೆಮಿಯು ಪ್ರತಿವರ್ಷ ‘ಆಂದೋಲನ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. 2020 ನೇ ಸಾಲಿನ ಪ್ರಶಸ್ತಿ ಗೌರವಕ್ಕೆ ‘ನಾವಿಕ’ ದಿನಪತ್ರಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಮಾಹಿತಿ ನೀಡಿದೆ.
‘ಇತ್ತೀಚೆಗಷ್ಟೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮ ಪುಟ ವಿನ್ಯಾಸಕ್ಕೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಪತ್ರಿಕೆಗೆ ಲಭಿಸಿತ್ತು. ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿಯು ಅತ್ಯುತ್ತಮ ಜಿಲ್ಲಾ ಮಟ್ಟದ ಪತ್ರಿಕೆ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ಆಂದೋಲನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇದು ಅತೀವ ಸಂತಸ ಉಂಟು ಮಾಡಿದೆ. ದಿವಂಗತರಾದ ತಮ್ಮ ತಂದೆ  ಎಸ್.ಹೆಚ್.ರಂಗಸ್ವಾಮಿಯವರ ಪರಿಶ್ರಮಕ್ಕೆ ಸಂದ ಪ್ರತಿಫಲವಾಗಿದೆ. ಕಳೆದ 46 ವರ್ಷಗಳಿಂದ ಪತ್ರಿಕೆ ಜನರಲ್ಲಿ ಉಳಿಸಿಕೊಂಡು ಬಂದಿರುವ ನಂಬಿಕೆಯ ದ್ಯೋತಕವಾಗಿದೆ’ ಎಂದು ‘ನಾವಿಕ’ ದಿನಪತ್ರಿಕೆ ಸುದ್ದಿ ಸಂಪಾದಕರಾದ ರಂಜಿತ್ ಅವರು ತಿಳಿಸಿದ್ದಾರೆ.

Previous post ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೌರವ
Next post ಚುರ್ಚಿಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರ ಆಯ್ಕೆ