
ಚುರ್ಚಿಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರ ಆಯ್ಕೆ
ಶಿಕಾರಿಪುರ, ಫೆ.11: ಶಿಕಾರಿಪುರ ತಾಲೂಕು ಚುರ್ಚಿಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಬಿ.ಮಂಜಪ್ಪ ಚುರ್ಚಿಗುಂಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದೆ ಅಧ್ಯಕ್ಷರಾಗಿದ್ದ ಬಿ.ಎಂ.ಫಾಲಾಕ್ಷಪ್ಪ ರಾಜಿನಾಮೆಯಿಂದ ತೆರವಾದ ಹುದ್ದೆಗೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಪಿಡಿಓ ನವೀನ್ ಹಾಜರಿದ್ದರು. ಉಪಾಧ್ಯಕ್ಷರಾದ ರಾಜಪ್ಪ, ಕಾರ್ಯದರ್ಶಿ ಮಂಜಪ್ಪ ನಿರ್ದೇಶಕರಾದ ಜೆ ಸಂಗಪ್ಪ, ಲತಾ, ರತ್ನಮ್ಮ, ನಾಗರಾಜ, ಎಸ್ ರಮೇಶ, ಉಮ್ಮತಲಿ, ರವಿಕುಮಾರ್, ಹಾಗು
ಗ್ರಾಮದ ಹಿರಿಯರಾದ ಚನ್ನಬಸಪ್ಪ,ಚುರ್ಚಿಗುಂಡಿ ಶಶಿಧರ, ಮಾನೇರ ಸುರೇಶ, ಸೋಮಸುಂದರ, ಮೆಹಬೂಬ ಉಪಸ್ಥಿತರಿದ್ದು ಆಯ್ಕೆಯಾದವರಿಗೆ ಶುಭ ಕೋರಿದರು.