ಎಸ್. ಬಂಗಾರಪ್ಪ ಫೌಂಡೇಷನ್ ನಿಂದ ನಿರಾಶ್ರಿತರ ಕೇಂದ್ರಕ್ಕೆ ಹೋಂ ಥಿಯೇಟರ್, ಪಾದರಕ್ಷೆಗಳ ನೆರವಿನಹಸ್ತ

ಶಿವಮೊಗ್ಗ, ನ. 2: ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ, ಎಸ್.ಬಂಗಾರಪ್ಪ ಫೌಂಡೇಷನ್ ಹಾಗೂ ಎಸ್.ಬಂಗಾರಪ್ಪ ಅಭಿಮಾನಿಗಳ ಬಳಗದಿಂದ ಗುರುವಾರ ಹೋಂ ಥಿಯೇಟರ್ ಹಾಗೂ ಪಾದರಕ್ಷೆಗಳನ್ನು ಕೊಡುಗೆಯಾಗಿ ನೀಡಲಾಯಿತು.

ಇತ್ತೀಚೆಗೆ ಪುನರ್ವಸತಿ ಕೇಂದ್ರದಲ್ಲಿ ಎನ್.ಎಸ್.ಯು.ಐ ಸಂಘಟನೆ ಆಯೋಜಿಸಿದ್ದ ಎಸ್.ಬಂಗಾರಪ್ಪ ಹುಟ್ಟುಹಬ್ಬ ಸಮಾರಂಭದ ವೇಳೆ ಸಚಿವ ಮಧು ಬಂಗಾರಪ್ಪ ಅವರು ಭಾಗವಹಿಸಿದ್ದರು.

ಈ ವೇಳೆ ನಿರಾಶ್ರಿತರ ಕೇಂದ್ರದವರು ಹೋಂ ಥಿಯೇಟರ್ ಹಾಗೂ ಪಾದರಕ್ಷೆಗಳ ಸಹಾಯಹಸ್ತ ಕೇಳಿದ್ದರು. ಕಾಲಮಿತಿಯೊಳಗೆ ಸೌಲಭ್ಯ ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದರು.

ಅದರಂತೆ ಗುರುವಾರ ಎಸ್.ಬಂಗಾರಪ್ಪ ಫೌಂಡೇಷನ್ ಮೂಲಕ ನಿರಾಶ್ರಿತರ ಕೇಂದ್ರಕ್ಕೆ 65 ಇಂಚಿನ ಹೋಂ ಥಿಯೇಟರ್ ಹಾಗೂ ಅಲ್ಲಿರುವ 230 ನಿರಾಶ್ರಿತರಿಗೆ ಪಾದರಕ್ಷೆಗಳನ್ನು ಒದಗಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಮಂಜುನಾಥ್, ಮುಕ್ತಿಯಾರ್ ಅಹ್ಮದ್, ಮುಹಿಬುಲ್ಲಖಾನ್, ಟಿ.ಡಿ.ಗೀತೇಂದ್ರಗೌಡ, ಮಧುಸೂಧನ್, ಎಂ.ಬಿ.ರವಿಕುಮಾರ್, ಜ್ಯೋತಿ ಅರಳಪ್ಪ, ಟಿ.ಮಂಜಪ್ಪ, ಗಿರೀಶ್, ರವಿ ಮೊದಲಾದವರಿದ್ದರು.

Previous post ‘ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್’ : ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
Next post ‘5 ವರ್ಷ ನಾನೇ ಮುಖ್ಯಮಂತ್ರಿ..!’ – ಸಿದ್ದರಾಮಯ್ಯ ಹೇಳಿಕೆ