ಸೊರಬದ ನ್ಯಾರ್ಶಿ ಬಳಿ ಭೀಕರ ಅಪಘಾತ : ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವು!

ಸೊರಬ, ನ. 6: ಬೈಕ್ ವೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಗದ್ದೆಗೆ ಉರುಳಿ ಬಿದ್ದ ಪರಿಣಾಮ, ಚಾಲಕ ಹಾಗೂ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ನ್ಯಾರ್ಶಿ ಬಳಿ ಶನಿವಾರ ರಾತ್ರಿ ನಡೆದಿದೆ.

ಹೊಸನಗರ ತಾಲೂಕು ರಿಪ್ಪನ್’ಪೇಟೆ ಸಮೀಪದ ಆಲುಗುಡ್ಡೆ ಗ್ರಾಮದ ನಿವಾಸಿಗಳಾದ ಸುಬ್ರಹ್ಮಣ್ಯ (20) ಹಾಗೂ ಹರ್ಷ (20) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.

ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಕೆಂಚಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಹೊನಲು – ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಗಮಿಸಲು ಇವರಿಬ್ಬರು ಬೈಕ್ ನಲ್ಲಿ ಆಗಮಿಸುತ್ತಿದ್ದರು.

ಈ  ವೇಳೆ ನ್ಯಾರ್ಶಿ ರಸ್ತೆಯ ತಿರುವಿನ ಬಳಿ ಚಾಲನೆಯ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಮರಕ್ಕೆ ಡಿಕ್ಕಿಯಾಗಿ, ಗದ್ದೆಗೆ ಬೈಕ್ ಉರುಳಿ ಬಿದ್ದು ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous post ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಎರಡು ಬಾಕ್ಸ್ ಗಳು : ಸ್ಥಳಕ್ಕೆ ಪೊಲೀಸರು ದೌಡು – ಮುಂದುವರಿದ ಪರಿಶೀಲನೆ!
Next post ಅನುಮಾನಾಸ್ಪದ ಬಾಕ್ಸ್ ಗಳಲ್ಲಿ ಇದ್ದಿದ್ದು ಅಡುಗೆ ಉಪ್ಪು, ರದ್ದಿ ವಸ್ತುಗಳು..!