ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ದಿಢೀರ್ ವರ್ಗಾವಣೆ : ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು? Sudden transfer of State President of Government Employees Union Shadakshari: What did Minister Madhu Bangarappa, MP B. Y. Raghavendra say?

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ದಿಢೀರ್ ವರ್ಗಾವಣೆ : ಸಚಿವ ಮಧು ಬಂಗಾರಪ್ಪ – ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗ, ನ. 8: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಶಿವಮೊಗ್ಗದಿಂದ ಕೋಲಾರಕ್ಕೆ ದಿಢೀರ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಿವಮೊಗ್ಗ ನಗರದ ಕರ್ನಾಟಕ ರಾಜ್ಯ ಲೆಕ್ಕಪತ್ರ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿ ಸಿ.ಎಸ್.ಷಡಾಕ್ಷರಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಇದೀಗ ಇವರನ್ನು ಕೋಲಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಸಿ.ಎಸ್.ಷಡಾಕ್ಷರಿ ವರ್ಗಾವಣೆ ಕುರಿತಂತೆ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಬುಧವಾರ ಶಿವಮೊಗ್ಗ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವರ ಪ್ರತಿಕ್ರಿಯೆ: ‘ಅವರ ಮೇಲೆ ಬಂದ ಆರೋಪಗಳ ಕುರಿತಂತೆ ಸರ್ಕಾರಕ್ಕೆ ವರದಿ ಕಳುಹಿಸಿ ಕೊಡಲಾಗಿತ್ತು. ಅದರ ಆಧಾರದ ಮೇಲೆ ಸರ್ಕಾರ ಕ್ರಮಕೈಗೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅವರ ವಿರುದ್ದದ ಆರೋಪದ ಕುರಿತಂತೆ ಇಲಾಖೆ ಸಭೆಯಲ್ಲಿ ಚರ್ಚೆಯಾಗಿತ್ತು. ಕಾನೂನು ರೀತ್ಯ ಸರ್ಕಾರ ಕ್ರಮಕೈಗೊಂಡಿದೆ ಎಂದು ಹೇಳಿದ್ದಾರೆ.

ಸಂಸದರು ಹೇಳಿದ್ದೇನು?: ‘ಯಾವ ಸರ್ಕಾರವಿರುತ್ತದೆಯೋ ಆ ಸರ್ಕಾರದ ಪರವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳುತ್ತಾರೆ. ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆದರೆ ರಾಜಕೀಯ ಪ್ರೇರಿತ ವರ್ಗಾವಣೆಗಳು ಸರಿಯಲ್ಲ’ ಎಂದು ಲೋಕಸಭಾ ಸದಸ್ಯ ಬಿ.ವೈರಾಘವೇಂದ್ರ ಅವರು ಸುದ್ದಿಗಾರರ ಪ್ರಶ್ನೆಗೆ ತಿಳಿಸಿದ್ದಾರೆ.

2 thoughts on “ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ದಿಢೀರ್ ವರ್ಗಾವಣೆ : ಸಚಿವ ಮಧು ಬಂಗಾರಪ್ಪ – ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?

  1. 7th Pay ಅನುಷ್ಠಾನಮಾಡುವುದು ಬಿಟ್ಟು ನಮ್ಮ ಬೃಹತ್ ಸಂಘದ ಅಧ್ಯಕ್ಷರನ್ನು ಸೇಡಿನ ಕ್ರಮವಾಗಿ ವರ್ಗಾವಣೆ ಮಾಡಿರುವುದು ಸರಿಯಲ್ಲ.
    ಇದು ಇಡೀ ನೌಕರವರ್ಗಕ್ಕೆ ಮಾಡಿದ ಅವಮಾನ…
    ಇದರಿಂದ ನ್ಯಾಯಯುತವಾದ ಬೇಡಿಕೆಗಳು ನಿಲ್ಲುವುದಿಲ್ಲ.ತಪ್ಪಿದ್ದರೆ ನೋಟೀಸ್ ಕೊಡಬಹುದಿತ್ತು…. ಯಾಕೆ ಕೊಟ್ಟಿಲ್ಲ…
    ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯಬಾರದು.
    ಸರ್ಕಾರ ಮತ್ತೊಮ್ಮೆ ಯೋಚನೆ ಮಾಡಿ ನಿರ್ಧಾರ ಮರುಪರಿಶೀಲನೆ ಮಾಡಿ 7th Pay ಜಾರಿಗೊಳಿಸಿ.. ವರ್ಗಾವಣೆ ರದ್ದುಪಡಿಸಿ…ನೌಕರ ವರ್ಗದ ಬೆಂಬಲ ಪಡೆಯಲಿ…

  2. ಒಬ್ಬರಿಗೊಂದು ನ್ಯಾಯ. ಇನ್ನಿಬ್ಬರಿಗೊಂದು ನ್ಯಾಯ ಎಂಬಂತಿದೆ ಇವರ ಮಾತು. ಷಡಕ್ಷರಿಯವರ ವಿರುದ್ಧ ಇದ್ದ ಸುಮಾರು ಜನರನ್ನು ಇವರು ಜಿಲ್ಕೆಯಿಂದಲೇ ಹೊರಗೆ ವರ್ಗಾವಣೆ ಮಾಡಿಸಿದ್ದಾರೆ. ಆಗ ಇದು ಸರಿಯಿತ್ತು.ಈಗ ಇದು ರಾಜಕೀಯದ ದ್ವೇಷ ಎಂದು ಹೇಳುತ್ತಾರಲ್ಲ. ಜನ ಏನು ಕಣ್ಣು ಮುಚ್ಚಿಕೊಂಡು ಇದ್ದಾರೆಯೇ. ಮಾಡಿದ್ದುಣ್ಣೋ ಮಹಾರಾಯ. ಈಗ ಸುಮ್ಮನಿರಬೇಕು.

Comments are closed.

ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಧಾರಾಕಾರ ವರ್ಷಧಾರೆ..! torrential rain in Shimoga early in the morning..! Previous post ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಧಾರಾಕಾರ ವರ್ಷಧಾರೆ..!
Shimoga: Maize crop is falling due to rain! ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವರ್ಷಧಾರೆ : ಮೆಕ್ಕೆಜೋಳ ಬೆಳೆಗಾರರು ಕಂಗಾಲು..! Shimoga: Maize crop is falling due to rain Next post ಶಿವಮೊಗ್ಗ : ಮಳೆಗೆ ನೆಲಕ್ಕೊರಗುತ್ತಿರುವ ಮೆಕ್ಕೆಜೋಳ ಬೆಳೆ!