
ಪೊಲೀಸರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ನಿರಂತರ ಸಂಸ್ಥೆಯ ಸದಸ್ಯರು
ಶಿವಮೊಗ್ಗ, ನ. 13: ಶಿವಮೊಗ್ಗ ನಗರದಲ್ಲಿ ಸೋಮವಾರ ನಿರಂತರ ಸಂಸ್ಥೆಯು ಪೊಲೀಸರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿತು.
ದೊಡ್ಡಪೇಟೆ ಪೊಲೀಸ್ ಠಾಣೆ ಆವರಣದಲ್ಲಿರುವ, ಪಶ್ಚಿಮ ಸಂಚಾರಿ ಠಾಣೆ ಅಧಿಕಾರಿ – ಸಿಬ್ಬಂದಿಗಳೊಂದಿಗೆ ಸಂಸ್ಥೆಯ ಸದಸ್ಯರು ದೀಪ ಬೆಳಗಿಸಿ ಹಬ್ಬ ಆಚರಿಸಿದರು.
‘ಹಬ್ಬಗಳ ವೇಳೆ ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಸೇರಿ ಆಚರಿಸುತ್ತೆವೆ. ಆದರೆ ಇದೆ ಹಬ್ಬಗಳ ಸಂದರ್ಭಗಳಲ್ಲಿ, ಪೊಲೀಸರು ನಮ್ಮನ್ನ ಕಾಯುತ್ತಾ ಕರ್ತವ್ಯ ನಿರತರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು’ ಎಂದು ನಿರಂತರ ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ನಿರಂತರ ಸಂಸ್ಥೆಯ ಸಂಸ್ಥಾಪಕರಾದ ಚೈತ್ರ ಸಜ್ಜನ್, ಸದಸ್ಯರಾದ ಸರೋಜಾ, ಶುಭ, ಭುಜಂಗಪ್ಪ, ಹಾಲೇಶ್, ಸುಜಾತ ಮೊದಲಾದವರಿದ್ದರು.