Kashipura flyover photos of Shimoga that are attracting public attention..! ಶಿವಮೊಗ್ಗ ಅರಣ್ಯ ಇಲಾಖೆ ಕಾರ್ಯಾಚರಣೆ : ಲಕ್ಷಾಂತರ ರೂ. ಮೌಲ್ಯದ ನಾಟಾ ವಶ : ಓರ್ವನ ಬಂಧನ!

ಸಾರ್ವಜನಿಕರ ಗಮನ ಸೆಳೆಯುತ್ತಿರುವ ಶಿವಮೊಗ್ಗದ ಕಾಶೀಪುರ ಫ್ಲೈ ಓವರ್ ಫೋಟೋಗಳು..!

ಶಿವಮೊಗ್ಗ, ನ. 15: ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿದ್ದ ರೈಲ್ವೆ ಮೇಲ್ಸೇತುವೆ (ಫ್ಲೈ ಓವರ್) ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಈ ನಡುವೆ ಡ್ರೋಣ್ ಮೂಲಕ ತೆಗೆಯಲಾದ ಫ್ಲೈ ಓವರ್ ನ ಕೆಲ ಫೋಟೋಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾರ್ವಜನಿಕರ ಗಮನ ಸೆಳೆಯುತ್ತಿವೆ.

Kashipura flyover photos of Shimoga that are attracting public attention..!

ಶಿವಮೊಗ್ಗ ಅರಣ್ಯ ಇಲಾಖೆ ಕಾರ್ಯಾಚರಣೆ : ಲಕ್ಷಾಂತರ ರೂ. ಮೌಲ್ಯದ ನಾಟಾ ವಶ : ಓರ್ವನ ಬಂಧನ!

ಸರಿಸುಮಾರು ಕಳೆದ ಎರಡೂವರೆ ವರ್ಷಗಳ ಹಿಂದೆ, ಕಾಶೀಪುರ ರೈಲ್ವೆ ಗೇಟ್ ಬಳಿ ಫ್ಲೈ ಓವರ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ,  ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ.

ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೊರೊನಾ, ಲಾಕ್ ಡೌನ್, ನಿರ್ಮಾಣ ಸಂಸ್ಥೆಯ ವಿಳಂಬಗತಿಯ ಕಾಮಗಾರಿ ಮತ್ತೀತರ ಕಾರಣಗಳಿಂದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು.

Kashipura flyover photos of Shimoga that are attracting public attention..!

ಶಿವಮೊಗ್ಗ ಅರಣ್ಯ ಇಲಾಖೆ ಕಾರ್ಯಾಚರಣೆ : ಲಕ್ಷಾಂತರ ರೂ. ಮೌಲ್ಯದ ನಾಟಾ ವಶ : ಓರ್ವನ ಬಂಧನ!

ದಟ್ಟಣೆ: ಗೆಜ್ಜೇನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ರೈಲುಗಳ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಈ ಕಾರಣದಿಂದ ಕಾಶೀಪುರ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ.

ಫ್ಲೈ ಓವರ್ ನಿರ್ಮಾಣಕ್ಕೂ ಮುನ್ನ ಸದರಿ ರೈಲ್ವೆ ಗೇಟ್ ಬಳಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ಫ್ಲೈ ಓವರ್ ನಿರ್ಮಾಣ ನಂತರ, ಸದರಿ ಸ್ಥಳದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಿದೆ.

Shimoga: Barbaric killing of a person on a busy road! ಶಿವಮೊಗ್ಗ : ಜನನಿಬಿಡ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! Previous post ಶಿವಮೊಗ್ಗ : ಜನನಿಬಿಡ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!
Holehonur Anavatti Pattana Panchayat elections are scheduled! ಹೊಳೆಹೊನ್ನೂರು ಆನವಟ್ಟಿ ಪಟ್ಟಣ ಪಂಚಾಯ್ತಿ ಚುನಾವಣೆ ನೆನೆಗುದಿಗೆ! ಸಾಗರ ನಗರಸಭೆ ಶಿಕಾರಿಪುರ ಶಿರಾಳಕೊಪ್ಪ ಸೊರಬ ಪುರಸಭೆ ಹೊಸನಗರ ಜೋಗಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ವಿಳಂಬ!! Next post ಹೊಳೆಹೊನ್ನೂರು, ಆನವಟ್ಟಿ ಪಟ್ಟಣ ಪಂಚಾಯ್ತಿ ಚುನಾವಣೆ ನೆನೆಗುದಿಗೆ!