
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸರ್ಕಾರಿ ಹೈಸ್ಕೂಲ್ ಬಾಲಕಿಯರ ದಂಡು!
ಭದ್ರಾವತಿ, ನ. 20: ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಪ್ರತ್ಯಕ್ಷ ವೀಕ್ಷಣೆ ಮಾಡುವ ತೆರೆದ ಮನೆ ಕಾರ್ಯಕ್ರಮದಡಿ, ಸೋಮವಾರ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಸರ್ಕಾರಿ ಹೈಸ್ಕೂಲ್ ಬಾಲಕಿಯರು ಭೇಟಿ ನೀಡಿದ್ದರು.
ಭದ್ರಾವತಿ ತಾಲೂಕು ಉಂಬ್ಳೆಬೈಲು ರಸ್ತೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ಠಾಣೆಗೆ ಭೇಟಿಯಿತ್ತು ಪೊಲೀಸರ ಕಾರ್ಯವೈಖರಿಯ ಖುದ್ದು ವೀಕ್ಷಣೆ ಮಾಡಿತು.
ಸಬ್ ಇನ್ಸ್’ಪೆಕ್ಟರ್ ರಮೇಶ್ ಅವರು ಠಾಣೆಯಲ್ಲಿ ಅಧಿಕಾರಿ – ಸಿಬ್ಬಂದಿಗಳ ಕಾರ್ಯವೈಖರಿ, ಮಕ್ಕಳ ಹಕ್ಕುಗಳು, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು, ಮಕ್ಕಳು ತಮ್ಮ ಸುರಕ್ಷತೆಗಾಗಿ ಅನುಸರಿಸಬೇಕಾದ ಕ್ರಮಗಳು,
ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ, ತುರ್ತು ಮತ್ತು ಅಗತ್ಯ ಸಂದರ್ಭಗಳಲ್ಲಿ ಇಆರ್’ಎಸ್ಎಸ್ – 112 ಸಹಾಯವಾಣಿ ಬಳಕೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.