
ಶಿವಮೊಗ್ಗದಲ್ಲಿ ಎಂಟೂವರೆ ಅಡಿ ಉದ್ದದ ಬೃಹದಾಕಾರದ ಹೆಬ್ಬಾವು ಸಂರಕ್ಷಣೆ!
ಶಿವಮೊಗ್ಗ, ನ. 30: ಶಿವಮೊಗ್ಗ ನಗರದ ಹೊರವಲಯ ಜೆ.ಹೆಚ್. ಪಟೇಲ್ ಬಡಾವಣೆಯ ಜನವಸತಿ ಪ್ರದೇಶದ ಬಳಿ ಬುಧವಾರ ರಾತ್ರಿ ಕಾಣಿಸಿಕೊಂಡ ಬೃಹದಾಕಾರದ ಹೆಬ್ಬಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ನಡೆದಿದೆ.
ಬಡಾವಣೆಯ ಚಾನೆಲ್ ಸಮೀಪದ ರಸ್ತೆಯ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಕಿರಣ್ ಅವರು, ಸುಮಾರು ಎಂಟೂವರೆ ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡುವುದಾಗಿ ಕಿರಣ್ ಅವರು ತಿಳಿಸಿದ್ದಾರೆ.