Applications are invited for filling up the vacant posts in Home Guards in various parts of Shimoga district ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಡಿ. 2:  ಸರ್ಕಾರದ ಸ್ವತಂತ್ರವಾದ ಶಿಸ್ತುಬದ್ದ ಹಾಗೂ ಸಮವಸ್ತ್ರದಾರಿ ಸ್ವಯಂಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾದ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳನ್ನು ತುಂಬಲು  ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪುರುಷ ಒಟ್ಟು 171 ಮತ್ತು ಮಹಿಳೆ 08 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.08 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಕೆಳಗೆ ತಿಳಿಸಲಾದ ಗೃಹರಕ್ಷಕ ದಳ ಘಟಕ / ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ.

ವಿವರ : ಶಿವಮೊಗ್ಗ  – ಪುರುಷ 39, ಮಹಿಳೆ 06 ಸಂಪರ್ಕಿಸಬೇಕಾದ ಘಟಕಾಧಿಕಾರಿ ಜಿ.ಇ.ಶಿವಾನಂದಪ್ಪ ಮೊ.ಸಂ: -9880705966. ಕುಂಸಿ –  ಪುರುಷ 05 : ಘಟಕಾಧಿಕಾರಿ ಪಿ.ಆರ್. ರಾಘವೇಂದ್ರ -9916573291, 

ಹಾರನಹಳ್ಳಿ – ಪುರುಷ 08 ಘಟಕಾಧಿಕಾರಿ : ಸಿ. ಮಧು – 9686631428. ಭದ್ರಾವತಿ –  ಪುರುಷ 17, ಮಹಿಳೆ 02 : ಘಟಕಾಧಿಕಾರಿ ಜಗದೀಶ್ – 9900283490. ಬಿ.ಆರ್.ಪಿ.- ಪುರುಷ 06 : ಘಟಕಾಧಿಕಾರಿ ಪಿ.ಮಹೇಶ – 9986760750, ಹೊಳೆಹೊನ್ನೂರು – ಪುರುಷ 11 : ಘಟಕಾಧಿಕಾರಿ ಹೆಚ್.ಎಸ್.ಸುನೀಲ್ ಕುಮಾರ್ – 8105840345.

ತೀರ್ಥಹಳ್ಳಿ – ಪುರುಷ 10 :  ಘಟಕಾಧಿಕಾರಿ ಹೆಚ್.ಪಿ.ರಾಘವೇಂದ್ರ – 9535388472. ಸಾಗರ – ಪುರುಷ 13 : ಘಟಕಾಧಿಕಾರಿ ಎಂ.ರಾಘವೇಂದ್ರ – 9632614031. ಜೋಗ – ಪುರುಷ 05 ಘಟಕಾಧಿಕಾರಿ ಡಿ.ಸಿದ್ದರಾಜು – 9449699459.

ಆನಂದಪುರ – ಪುರುಷ 07 : ಘಟಕಾಧಿಕಾರಿ ಎಂ.ರಾಘವೇಂದ್ರ – 9632614031. ಶಿಕಾರಿಪುರ – ಪುರುಷ 09 : ಡಾ.ಸಂತೋಷ್ ಎಸ್ ಶೆಟ್ಟಿ – 9845402789. ಶಿರಾಳಕೊಪ್ಪ- ಪುರುಷ 05 : ಘಟಕಾಧಿಕಾರಿ ಸೈಯದ್ ಇಸಾಕ್ – 8861492078.

ಹೊಸನಗರ – ಪುರುಷ 11 : ಘಟಕಾಧಿಕಾರಿ ಕೆ.ಅಶೋಕ್ – 9241434669. ರಿಪ್ಪನ್‍ಪೇಟೆ – ಪುರುಷ 11 : ಘಟಕಾಧಿಕಾರಿ ಟಿ. ಶಶಿಧರಾಚಾರ್ಯ – 9741477689. ಸೊರಬ – ಪುರುಷ 14 : ಘಟಕಾಧಿಕಾರಿ ಬಿ.ರೇವಣಪ್ಪ – 9945066084. 

ಅರ್ಹತೆ : ಗೃಹರಕ್ಷಕರಾಗಲು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟು 45 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 10 ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು.

ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ / ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ/ ದಾಖಲಾಗಿರದಿದ್ದಲ್ಲಿ ಅಂತಹವರು ಹಾಗೂ ಘಟಕ ಇರುವ ಸ್ಥಳದಿಂದ ಸುಮಾರು 8 ರಿಮದ 12 ಕಿ.ಮೀ ಅಂತರದಲ್ಲಿರುವವರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗೃಹರಕ್ಷಕದಳ ಜಿಲ್ಲಾ ಗೌರವ ಸಮಾದೇಷ್ಟರಾದ ಚಂದನ್ ಪಟೇಲ್ ಎಂ. ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Missing mother with two children: Police appeal for information ಇಬ್ಬರು ಮಕ್ಕಳೊಂದಿಗೆ ಕಣ್ಮರೆಯಾದ ತಾಯಿ : ಮಾಹಿತಿ ನೀಡಲು ಪೊಲೀಸರ ಮನವಿ Previous post ಇಬ್ಬರು ಮಕ್ಕಳೊಂದಿಗೆ ಕಣ್ಮರೆಯಾದ ತಾಯಿ : ಮಾಹಿತಿ ನೀಡಲು ಪೊಲೀಸರ ಮನವಿ
A man who was traveling in a scooty was killed by pouring petrol on him and setting him on fire! ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ! Next post ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ!