
‘ಅಲ್ಪಸಂಖ್ಯಾತರ ಓಲೈಕೆ ಸರಿಯಲ್ಲ’ : ಸಿದ್ದರಾಮಯ್ಯ ವಿರುದ್ದ ಯಡಿಯೂರಪ್ಪ ಆಕ್ರೋಶ
ಶಿವಮೊಗ್ಗ, ಡಿ. 6: ‘ಅಲ್ಪಸಂಖ್ಯಾತರಿಗೆ ಹಣ ಕೊಡಲು ಅಭ್ಯಂತರವಿಲ್ಲ. ಆದರೆ ಅದನ್ನೇ ದೊಡ್ಡದನ್ನಾಗಿ ಮಾಡಿಕೊಂಡು 10 ಸಾವಿರ ಕೋಟಿ ರೂ. ಕೊಡುತ್ತಿದ್ದೆನೆ ಎಂದು ಹೇಳಿ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವುದು ಶೋಭೆ ತರುವಂತದ್ದಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಅವರ ಈ ಕ್ರಮದಿಂದ ಹಿಂದೂಗಳ ಆಕ್ರೋಶಕ್ಕೂ ಅವಕಾಶವಾಗುತ್ತದೆ. ಮುಖ್ಯಮಂತ್ರಿಯವರಿಂದ ಈ ರೀತಿಯ ಮಾತುಗಳನ್ನ ತಾವು ನಿರೀಕ್ಷೆ ಮಾಡಿದ್ದೆ ಎಂದರು.
ಸಿಎಂ ಅವರ ಈ ಮಾತುಗಳನ್ನು ಈಗಾಗಲೇ ಕೆಲ ಮಠಾಧಿಪತಿಗಳು ಖಂಡಿಸಿದ್ದಾರೆ. ಇನ್ನಾದರೂ ಮಾತನಾಡುವ ವೇಳೆ ಎಚ್ಚರಿಕೆಯಿಂದ ಮಾತನಾಡಬೇಕೆಂಬ ಸಲಹೆಯನ್ನು ಸಿಎಂಗೆ ನೀಡುತ್ತೆನೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಚುನಾವಣೆ ನಡೆಸುತ್ತೆವೆ. ಬಿಜೆಪಿ ಪರವಾದ ವಾತಾವರಣವಿದೆ. ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸುತ್ತೆವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
More Stories
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 18 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 18: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, ಏ. 18 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ...