
ಬೈಕ್ ವ್ಹೀಲಿಂಗ್ ಪ್ರಕರಣ : ಮೂವರಿಗೆ ದಂಡ ವಿಧಿಸಿ ನ್ಯಾಯಾಲಯ ಆದೇಶ
ಶಿವಮೊಗ್ಗ, ಡಿ. 7: ಬೈಕ್ ವ್ಹೀಲಿಂಗ್ ಮಾಡಿದ್ದ ಇಬ್ಬರು ಯುವಕರು ಹಾಗೂ ಬೈಕ್ ಮಾಲೀಕನಿಗೆ ಶಿವಮೊಗ್ಗದ 3 ನೇ ಎಸಿಜೆ ಮತ್ತು ಜೆಎಂಎಫ್’ಸಿ ನ್ಯಾಯಾಲಯವು ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬೈಕ್ ಚಾಲಕರಾದ ಶಿವಮೊಗ್ಗದ ಇಲಿಯಾಸ್ ನಗರದ ನಿವಾಸಿ ಫೈಸಲ್ ಅಹ್ಮದ್ (20) ಎಂಬಾತನಿಗೆ 11 ಸಾವಿರ ರೂ., ಟ್ಯಾಂಕ್ ಮೊಹಲ್ಲಾದ ಸೂಫಿಯಾನ್ ಖಾನ್ (21) ಎಂಬಾತನಿಗೆ 8 ಸಾವಿರ ರೂ. ಹಾಗೂ ಬೈಕ್ ಆರ್.ಸಿ. ಮಾಲೀಕರಾದ ಇಲಿಯಾಸ್ ನಗರದ ಮೊಹಮ್ಮದ್ ಸೈಫುಲ್ಲಾ (50) ಅವರಿಗೆ 4500 ರೂ. ದಂಡ ವಿಧಿಸಲಾಗಿದೆ.
ನ್ಯಾಯಾಧೀಶರಾದ ಮಾಯಪ್ಪ ಅವರು 6-12-2023 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: 15-8-2023 ರಂದು ಬೆಳಿಗ್ಗೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿವಿಎಸ್ ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ, ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್, ಎರಡು ಬೈಕ್ ಗಳಲ್ಲಿ ಅತೀ ವೇಗ ಹಾಗೂ ಅಜಾಗರೂಕವಾಗಿ ವ್ಹೀಲಿಂಗ್ ಮಾಡುತ್ತ ಬೈಕ್ ಚಲಾಯಿಸಿದ್ದರು.
ಸಬ್ ಇನ್ಸ್’ಪೆಕ್ಟರ್ ತಿರುಮಲೇಶ‍್ ಅವರು ಬೈಕ್ ಚಾಲರು ಹಾಗೂ ವಾಹನ ಮಾಲೀಕರ ವಿರುದ್ದ ಐಪಿಸಿ ಹಾಗೂ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
More Stories
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 18 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 18: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, ಏ. 18 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ...