
ಪರಿಸರ ಪ್ರೇಮಿ ಮನೆ ಮುಂಭಾಗವಿದ್ದ ಶ್ರೀಗಂಧದ ಮರಗಳನ್ನೇ ಕಳವು ಮಾಡಿದ ಕಳ್ಳರು!
ಸಾಗರ, ಡಿ. 10: ಮನೆಯೊಂದರ ಮುಂಭಾಗವಿದ್ದ ಎರಡು ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕೊಂಡೊಯ್ದಿರುವ ಘಟನೆ ಸಾಗರ ನಗರದ ರಾಂಪುರ ಬಡಾವಣೆಯ ಸುವಿಧಾ ಸೂಪರ್ ಮಾರ್ಕೆಟ್ ಸಮೀಪ ನಡೆದಿದೆ.
ಪರಿಸರ ಪ್ರೇಮಿ ಗೌತಮ್ ಪೈ ಎಂಬುವರ ಮನೆಯ ಬಳಿ ಈ ಘಟನೆ ನಡೆದಿದೆ. ‘ಡಿ. 6 ರ ಮುಂಜಾನೆ ಸರಿಸುಮಾರು 2.30 ರ ನಂತರ ಈ ಕೃತ್ಯ ನಡೆಸಲಾಗಿದೆ. ಒಂದು ಮರ 22 ವರ್ಷ ಹಾಗೂ ಮತ್ತೊಂದು ಮರ 18 ವರ್ಷ ಹಳೇಯದ್ದಾಗಿದೆ.
ಅತ್ಯಂತ ವ್ಯವಸ್ಥಿತವಾಗಿ ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ’ ಎಂದು ಗೌತಮ್ ಪೈ ಅವರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಆರ್.ಎಫ್.ಓ ಅರವಿಂದ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.