
ರಾಜ್ಯದ ವಿವಿಧೆಡೆ 17 ಬೈಕ್ ಕಳವು ಮಾಡಿದ್ದ17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ!
ಶಿವಮೊಗ್ಗ, ಡಿ. 12: ರಾಜ್ಯದ ವಿವಿಧೆಡೆ 17 ದ್ವಿ ಚಕ್ರ ವಾಹನಗಳ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ಕಾನೂನು ಸಂಘರ್ಷಕ್ಕೊಳಗಾದ 17 ವರ್ಷ ವಯೋಮಾನದ ಬಾಲಕನೋರ್ವನನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ವಶಕ್ಕೆ ಪಡೆದ ಬೈಕ್ ಗಳ ಒಟ್ಟು ಮೌಲ್ಯ10,55,000 ರೂ.ಗಳೆಂದು ಅಂದಾಜಿಸಲಾಗಿದೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನದಿಂದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 4 ಪ್ರಕರಣ,
ಸಾಗರದ 1, ಸಕರಾಯಪಟ್ಟಣದ 1, ರಾಮನಗರ ಪಟ್ಟಣದ 1, ದಾವಣಗೆರೆಯ 4, ಹೊನ್ನಾಳ್ಳಿಯ 1, ಭದ್ರಾವತಿಯ 1, ಮೈಸೂರಿನ 1, ತಿಪಟೂರಿನ 1, ಹಾಸನದ 1, ಹರಪನಹಳ್ಳಿಯ 1 ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.
ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾದ ದೊಡ್ಡಪೇಟೆ ಠಾಣೆ ಪೊಲೀಸ್ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಇನ್ಸ್’ಪೆಕ್ಟರ್ ರವಿಕುಮಾರ್, ಸಬ್ ಇನ್ಸ್’ಪೆಕ್ಟರ್ ಶ್ರೀನಿವಾಸ್, ತಿಮ್ಮಪ್ಪ ಮೊದಲಾದವರಿದ್ದರು.