Modification of bike installation of shrill horn : RS - 16500 Fine for the youth ಬೈಕ್ ಮಾರ್ಪಡಿಸಿ, ಕರ್ಕಶ ಹಾರ್ನ್ ಅಳವಡಿಕೆ : ಶಿವಮೊಗ್ಗದ ಯುವಕನಿಗೆ 16,500 ರೂ. ದಂಡ ವಿಧಿಸಿದ ಕೋರ್ಟ್!

ಬೈಕ್ ಮಾರ್ಪಡಿಸಿ, ಕರ್ಕಶ ಹಾರ್ನ್ ಅಳವಡಿಕೆ : ಯುವಕನಿಗೆ 16,500 ರೂ. ದಂಡ ವಿಧಿಸಿದ ಕೋರ್ಟ್!

ಶಿವಮೊಗ್ಗ, ಡಿ. 14: ಬೈಕ್ ಮಾರ್ಪಡಿಸಿ, ಕರ್ಕಶ ಶಬ್ದ ಹೊರಹೊಮ್ಮುವ ಹಾರ್ನ್ ಅಳವಡಿಸಿದ್ದ ಯುವಕನಿಗೆ, ಶಿವಮೊಗ್ಗದ 3 ನೇ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು 16,500 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಧನಂಜಯ (19 ವರ್ಷ) ನ್ಯಾಯಾಲಯದಿಂದ ದಂಡ ಹಾಕಿಸಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಯುವಕನು ತನ್ನ ಬಳಿಯಿದ್ದ ಬಜಾಜ್ ಕವಾಸಕಿ ಬೈಕ್ ನ್ನು ಯಮಹಾ ಆರ್.ಎಕ್ಸ್. – 100 ರೀತಿ ಕಾಣುವ ಹಾಗೆ ಸಂಪೂರ್ಣ ಬದಲಾವಣೆ (Alteration) ಮಾಡಿಸಿಕೊಂಡಿದ್ದ. ಜೊತೆಗೆ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ ಅಳವಡಿಸಿಕೊಂಡಿದ್ದ.

ಈ ಕುರಿತಂತೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ನವೀನ್ ಕುಮಾರ್ ಮಠಪತಿ ಅವರು ಸದರಿ ಬೈಕ್ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು.

ಯುವಕನ ವಿರುದ್ದ ಐಎಂವಿ ಕಾಯ್ದೆಯಡಿ ಲಘು ಪ್ರಕರಣ ದಾಖಲಿಸಿದ್ದರು. ನಂತರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Massive security failure: Two youths who broke into the Lok Sabha were caught by the MP! ಭಾರೀ ಭದ್ರತಾ ವೈಫಲ್ಯ : ಲೋಕಸಭೆಗೆ ನುಗ್ಗಿದ ಇಬ್ಬರು ಯುವಕರನ್ನು ಸಂಸದರೇ ಹಿಡಿದುಕೊಟ್ಟರು! Previous post ಭಾರೀ ಭದ್ರತಾ ವೈಫಲ್ಯ : ಲೋಕಸಭೆಗೆ ನುಗ್ಗಿದ ಇಬ್ಬರು ಯುವಕರನ್ನು ಸಂಸದರೇ ಹಿಡಿದುಕೊಟ್ಟರು!
Steps to implement security measures at Shimoga Airport: Union Minister's assurance to MPs ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಕ್ರಮ : ಸಂಸದರಿಗೆ ಕೇಂದ್ರ ಸಚಿವರ ಭರವಸೆ Next post ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಕ್ರಮ : ಸಂಸದರಿಗೆ ಕೇಂದ್ರ ಸಚಿವರ ಭರವಸೆ