ಡಾ.ಬಿ.ಆರ್.ಅಂಬೇಡ್ಕರ್’ಗೆ ಅಪಮಾನ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಶಿವಮೊಗ್ಗ, ಫೆ. 13: ಬೆಂಗಳೂರಿನ ಕಾಲೇಜ್ ವೊಂದರಲ್ಲಿ ನಡೆದ ನಾಟಕದ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಲಿತ ಸಮುದಾಯದವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ, ಸೋಮವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಂವಿಧಾನ ಹಕ್ಕುಗಳ ಸಂರಕ್ಷಣಾ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಭೀಮಪುತ್ರಿ ಬ್ರಿಗೇಡ್, ಕನಾ೯ಟಕ ರಾಜ್ಯ ಮಾದಿಗ ಸಮಾಜದವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಾಲೇಜ್ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ. ಆರ್. ಹೆಚ್. ಎಸ್. ರಾಜ್ಯ ಪ್ರಧಾನ ಕಾಯ೯ದಶಿ೯ ಭಾನು ಪ್ರಸಾದ್ ಬಿ. ಎ., ಭೀಮಪುತ್ರಿ ಬ್ರಿಗೇಡ್ ನ ಜಿಲ್ಲಾಧ್ಯಕ್ಷರಾದ ಚಿರಂಜೀವಿ ಬಾಬು, ರಾಜ್ಯ ಯೂತ್ ಅಧ್ಯಕ್ಷರಾದ ರುದ್ರೇಶ್, ಎಂ. ಆರ್. ಹೆಚ್. ಎಸ್. ಜಿಲ್ಲಾಧ್ಯಕ್ಷರಾದ ನಿರಂಜನ್ ಮೂತಿ೯.ಆರ್.ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಎನ್, ಜಿಲ್ಲಾ ಉಪಾಧ್ಯಕ್ಷರಾದ ಅನುಪ್ ವಿ, ನಗರಾಧ್ಯಕ್ಷರಾದ ಶ್ರೀಧರ್ ಎಲ್, ನಗರ ಉಪಾಧ್ಯಕ್ಷರಾದ ರಾಮ್ ಕುಮಾರ್ ಆರ್, ಮಧು, ಸಹ ಕಾಯ೯ದಶಿ೯ ಅನಿಲ್ ಆರ್ ಮೊದಲಾದವರು ಉಪಸ್ಥಿತರಿದ್ದರು.

Previous post ಡಿಎಸ್ಎಸ್ ನಿಂದ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಸತ್ಯಾಗ್ರಹ
Next post ಡಿಎಆರ್ ಆವರಣದಲ್ಲಿ ಮುಂದುವರಿದ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ!