Final date not set for doing gas cylinder e-KYC: Food department clarifies ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ : ಆಹಾರ ಇಲಾಖೆ ಸ್ಪಷ್ಟನೆ

ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ : ಆಹಾರ ಇಲಾಖೆ ಸ್ಪಷ್ಟನೆ

ಶಿವಮೊಗ್ಗ, ಡಿ. 28: ‘ಗ್ಯಾಸ್ ಸಿಲಿಂಡರ್ ಸಂಪರ್ಕ ಹೊಂದಿದವರು ಆಧಾರ್ ಇ – ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಅಂತಿಮ ದಿನಾಂಕ ನಿಗದಿಪಡಿಸಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬಹುದಾಗಿದೆ’ ಎಂದು ಆಹಾರ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಅವಿನ್ ಆರ್ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಅವರು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇ-ಕೆವೈಸಿ ಮಾಡಿಸಲು ಗ್ಯಾಸ್ ಏಜನ್ಸಿಗಳ ಮುಂದೆ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿರುವುದಿಲ್ಲ. ಸಿಲಿಂಡರ್ ಮನೆಗೆ ವಿತರಣೆ ಮಾಡುವ ವೇಳೆಯೂ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

ಹಾಗೆಯೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯಿಲ್ ಒನ್, ವಿಟ್ರನ್ ಹೆಚ್.ಪಿ. ಗ್ಯಾಸ್ ಗಳಿಗೆ ಮೊಬೈಲ್ ಆಪ್ ಗಳ ಮೂಲಕವು ಇ-ಕೆವೈಸಿ ಮಾಡಿಸಬಹುದಾಗಿದೆ ಎಂದು ಎಂದು ಅವರು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಜನಜಂಗುಳಿ : ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಇ-ಕೆವೈಸಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಾನಾ ರೀತಿಯ ವದಂತಿಗಳು ಸಾರ್ವಜನಿಕ ವಲಯದಲ್ಲಿ ಹಬ್ಬಿದ್ದವು. ಕಾಲಮಿತಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗೃಹ ಬಳಕೆ ಸಿಲಿಂಡರ್ ಗೆ ದೊರಕವು ಸಬ್ಸಿಡಿ ರದ್ದಾಗಲಿದೆ ಎಂದೆಲ್ಲ ಹೇಳಲಾಗಿತ್ತು.  

ಇದರಿಂದ ಇ-ಕೆವೈಸಿ ಮಾಡಿಸಲು ನಾಗರೀಕರು ಗ್ಯಾಸ್ ಏಜೆನ್ಸಿಗಳಿಗೆ ಮುಗಿಬೀಳಲಾರಂಭಿಸಿದ್ದರು. ಇದರಿಂದ ಗ್ಯಾಸ್ ಏಜೆನ್ಸಿಗಳ ಬಳಿ ಜನಜಂಗುಳಿ ಸೃಷ್ಟಿಯಾಗಿತ್ತು. ಇದು ಸಾಕಷ್ಟು ಗೊಂದಲ, ಗಡಿಬಿಡಿಗೂ ಕಾರಣವಾಗಿತ್ತು.

SP Warning: Shimoga police on alert – attack on ganja stalls! ಎಸ್ಪಿ ವಾರ್ನಿಂಗ್ : ಎಚ್ಚೆತ್ತ ಶಿವಮೊಗ್ಗ ಪೊಲೀಸರು – ಗಾಂಜಾ ಅಡ್ಡೆಗಳ ಮೇಲೆ ದಾಳಿ! Previous post ಎಸ್ಪಿ ವಾರ್ನಿಂಗ್ : ಎಚ್ಚೆತ್ತ ಶಿವಮೊಗ್ಗ ಪೊಲೀಸರು..!
Shimoga: Jaya Karnataka organization requests to take action for adoption of Kannada nameplate ಶಿವಮೊಗ್ಗ : ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳಲು ಜಯ ಕರ್ನಾಟಕ ಸಂಘಟನೆ ಮನವಿ Next post ಶಿವಮೊಗ್ಗ : ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳಲು ಜಯ ಕರ್ನಾಟಕ ಸಂಘಟನೆ ಮನವಿ