Shimoga: Jaya Karnataka organization requests to take action for adoption of Kannada nameplate ಶಿವಮೊಗ್ಗ : ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳಲು ಜಯ ಕರ್ನಾಟಕ ಸಂಘಟನೆ ಮನವಿ

ಶಿವಮೊಗ್ಗ : ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳಲು ಜಯ ಕರ್ನಾಟಕ ಸಂಘಟನೆ ಮನವಿ

ಶಿವಮೊಗ್ಗ, ಡಿ. 28: ಶಿವಮೊಗ್ಗ ಜಿಲ್ಲೆಯ ಎಲ್ಲ ವ್ಯಾಪಾರ-ವಹಿವಾಟು ಕಟ್ಟಡ, ಸಾರ್ವಜನಿಕ ಕಚೇರಿ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಈ ಸಂಬಂಧ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಯ ಕರ್ನಾಟಕ ಸಂಘಟನೆಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಪತ್ರ ಅರ್ಪಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಹೋರಾಟವನ್ನು ಕನ್ನಡ ಸಂಘಟನೆಗಳು ನಡೆಸುತ್ತಿವೆ. ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಹೋರಾಟಕ್ಕೆ ಅವಕಾಶವಾಗದಂತೆ, ಕನ್ನಡ ನಾಮಫಲಕ ಅಳವಡಿಕೆಗೆ ಆಡಳಿತ ಸಂಬಂಧಿಸಿದವರಿಗೆ ಸೂಚನೆ ನೀಡಬೇಕು ಎಂದು ಸಂಘಟನೆ ಮನವಿ ಮಾಡಿದೆ.

ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ವಾಣಿಜ್ಯ, ವಹಿವಾಟು ಕಟ್ಟಡದವರಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ನಡೆಸಬೇಕು. ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ಸಂಘಟನೆ ಮನವಿ ಪತ್ರದಲ್ಲಿ ಸಲಹೆ ನೀಡಿದೆ.

ಮನವಿ ಅರ್ಪಿಸುವ ವೇಳೆ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಪರಶುರಾಮ್ ಡಿ.ಜಿ. ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Final date not set for doing gas cylinder e-KYC: Food department clarifies ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ : ಆಹಾರ ಇಲಾಖೆ ಸ್ಪಷ್ಟನೆ Previous post ಗ್ಯಾಸ್ ಸಿಲಿಂಡರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ : ಆಹಾರ ಇಲಾಖೆ ಸ್ಪಷ್ಟನೆ
Shimoga: The 2nd phase outer ring road project fell into disrepute! ಶಿವಮೊಗ್ಗ : ನೆನೆಗುದಿಗೆ ಬಿದ್ದ 2 ನೇ ಹಂತದ ಹೊರವರ್ತುಲ ರಸ್ತೆ ಯೋಜನೆ! ಗಮನಹರಿಸುವರೆ ಕೇಂದ್ರ ಭೂ ಸಾರಿಗೆ ಸಚಿವ ಗಡ್ಕರಿ, ಸಂಸದ ಬಿ.ವೈ.ರಾಘವೇಂದ್ರ? Next post ಶಿವಮೊಗ್ಗ : ನೆನೆಗುದಿಗೆ ಬಿದ್ದ 2 ನೇ ಹಂತದ ಹೊರವರ್ತುಲ ರಸ್ತೆ ಯೋಜನೆ!