Shimoga : A partially decomposed body was found in a lorry parked near a cinema! ಶಿವಮೊಗ್ಗ : ಸಿನಿಮಾ ಥಿಯೇಟರ್ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಶಿವಮೊಗ್ಗ : ಸಿನಿಮಾ ಥಿಯೇಟರ್ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಶಿವಮೊಗ್ಗ, ಡಿ. 30: ಶಿವಮೊಗ್ಗ ನಗರದ ವೀರಭದ್ರ  ಟಾಕೀಸ್ ಬಳಿ ನಿಲ್ಲಿಸಿದ್ದ ಈಚರ್ ಲಾರಿಯೊಂದರಲ್ಲಿ, ಸರಿಸುಮಾರು 30-40 ವರ್ಷ ವಯಸ್ಸಿನ ಪುರುಷನೋರ್ವನ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮೃತರ ಹೆಸರು, ವಿಳಾಸ, ವಾರಸುದಾರರ ಮಾಹಿತಿ ತಿಳಿದುಬಂದಿಲ್ಲ. ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು ಶವವು ಭಾಗಶಃ ಕೊಳೆತು ಹೋಗಿರುವುದರಿಂದ ಮುಖದ ಚಹರೆ ಗುರುತು ಸಿಗುತ್ತಿಲ್ಲ.

ಉಳಿದಂತೆ ಮೃತರ ಮೈಮೇಲೆ ಮಾಸಲು  ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Worms coming from FCI warehouse in Alkola, Shimoga : Citizens panic..! ಶಿವಮೊಗ್ಗದ ಆಲ್ಕೋಳದ ಎಫ್.ಸಿ.ಐ ಗೋದಾಮಿನಿಂದ ಬರುವ ಹುಳು, ಹುಪ್ಪಟ್ಟೆ : ನಾಗರೀಕರು ತತ್ತರ..! Previous post ಶಿವಮೊಗ್ಗದ ಆಲ್ಕೋಳದ ಎಫ್.ಸಿ.ಐ ಗೋದಾಮಿನಿಂದ ಬರುವ ಹುಳು, ಹುಪ್ಪಟ್ಟೆ : ನಾಗರೀಕರು ತತ್ತರ..!
K. Eshwar Bommanakatte appointed as Shimoga District Congress Secretary ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕೆ.ಈಶ್ವರ್ ಬೊಮ್ಮನಕಟ್ಟೆ ನೇಮಕ Next post ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕೆ.ಈಶ್ವರ್ ಬೊಮ್ಮನಕಟ್ಟೆ ನೇಮಕ