
ಹೊಸ ವರ್ಷದಂದೇ ಹೊಸ ಇತಿಹಾಸ ನಿರ್ಮಿಸಿದ ಇಸ್ರೋ..!
ಶ‍್ರೀಹರಿಕೋಟಾ (ಆಂಧ‍್ರಪ್ರದೇಶ), ಜ. 1: ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಹೊಸ ವರ್ಷದ (New Year) ಮೊದಲ ದಿನವಾದ ಸೋಮವಾರ, ಹೊಸದೊಂದು ಇತಿಹಾಸ ಸೃಷ್ಟಿಸಿದೆ!
ಹೌದು. ಇಸ್ರೋ ಸಂಸ್ಥೆಯು ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ ಎಕ್ಸ್’ಪೋಸ್ಯಾಟ್ (XPoSat) ಉಪಗ್ರಹ (Satellite) ವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣ ನೆಲೆಯಿಂದ ಬೆಳಿಗ್ಗೆ 9.10 ಕ್ಕೆ ಪಿಎಸ್ಎಲ್’ವಿ – ಸಿ 58 ರಾಕೆಟ್ ಮೂಲಕ, ಎಕ್ಸ್’ಪೋಸ್ಯಾಟ್ ಉಪಗ್ರಹ (satellite) ವನ್ನು ಯಶಸ್ವಿಯಾಗಿ ನಭಕ್ಕೆ ಹಾರಿಸಲಾಗಿದೆ. ಸದರಿ ಉಪಗ್ರಹವು ಕಪ್ಪುಕುಳಿ (ಬ್ಲ್ಯಾಕ್ ಹೋಲ್) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲವನ್ನು ಅಧ್ಯಯನ ಮಾಡಲಿದೆ.
ಎಕ್ಸ್’ಪೋಸ್ಯಾಟ್ ಉಪಗ್ರಹದ ಜೊತೆಗೆ ಪಿಎಸ್ ಪಿಎಸ್‌ಎಲ್‌ವಿ (PSLV) ಇತರ ಹತ್ತು ಉಪಗ್ರಹ ( ಗಳನ್ನು ಕೂಡ ಹೊತ್ತೊಯ್ದಿದೆ. ಈ ಉಪಗ್ರಹಗಳನ್ನು ಸ್ಟಾರ್ಟ್‌ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿವೆ.