60% Kannada is mandatory in advertisement boards of associationsಸಂಘ-ಸಂಸ್ಥೆಗಳ ಜಾಹೀರಾತು ಫಲಕಗಳಲ್ಲಿ ಶೇ.60% ಕನ್ನಡ ಕಡ್ಡಾಯ*

ಸಂಘ-ಸಂಸ್ಥೆಗಳ ಜಾಹೀರಾತು ಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ

ಶಿವಮೊಗ್ಗ, ಜ. 6:  ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳು ಕನಿಷ್ಠ ಶೇ.60 ರಷ್ಟು ಕಡ್ಡಾಯವಾಗಿ ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದಲ್ಲಿ ಇರುವಂತೆ ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ.

ಯಾವುದೇ ದ್ವಿಭಾಷಾ ಅಥವಾ ಬಹುಭಾಷಾ ಫಲಕಗಳು ಇದ್ದಲ್ಲಿ ಗರಿಷ್ಠ ಪ್ರಮಾಣ ಶೇ. 60 ರಷ್ಟು ಕನ್ನಡದಲ್ಲಿಯೇ ಅಳವಡಿಸಿಕೊಳ್ಳಲು ಎಲ್ಲಾ ಅಂಗಡಿ ಮಾಲೀಕರುಗಳು ಕೂಡಲೇ ಕ್ರಮ ಕೈಗೊಳ್ಳುವುದು.

ಕನ್ನಡ ಫಲಕಗಳನ್ನು ಪ್ರದರ್ಶಿಸಲು 15 ದಿನಗಳಲ್ಲಿ ಕ್ರಮವಹಿಸದೇ ಇದ್ದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜಂಟಿ ಸರ್ವೆಗಳನ್ನು ನಡೆಸಿ ಪ್ರತ್ಯೇಕವಾಗಿ ನಿಯಮಾನುಸಾರ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳನ್ನು ಅಳವಡಿಸದೇ ಇರುವಂತಹ ಅಂಗಡಿಯ ಮಾಲೀಕರುಗಳಿಗೆ ಅಥವಾ ಸಂಬಂಧಪಟ್ಟಂತ ನಿಯಮ ಉಲ್ಲಂಘನೆ ಮಾಡುವವರಿಗೆ,

ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸುವ ಮತ್ತು ಕರ್ನಾಟಕ ಕಾರ್ಪೋರೇಷನ್ ಕಾಯ್ದೆ 1976ರ ಸಂಬಂಧಪಟ್ಟ ವಿಧಿಗಳ ಅನ್ವಯದಂತೆ ಹಾಗೂ ಪ್ರಚಲಿತ ಕಾನೂನು ನಿಯಮಗಳಂತೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Bhadra dam - Water from Bhadra Dam left bank channel 10 - right bank channel from 20 ಭದ್ರಾ ಡ್ಯಾಂ : ಎಡದಂಡೆ ನಾಲೆಗೆ ಜ.10 ಬಲದಂಡೆ ನಾಲೆಗೆ ಜ.20 ರಿಂದ ನೀರು Previous post ಭದ್ರಾ ಡ್ಯಾಂ : ಎಡದಂಡೆ ನಾಲೆಗೆ ಜ.10 – ಬಲದಂಡೆ ನಾಲೆಗೆ ಜ.20 ರಿಂದ ನೀರು
Shimoga: Circular flyover work in full phase - when will it be inaugurated? ಶಿವಮೊಗ್ಗ : ಪೂರ್ಣ ಹಂತಕ್ಕೆ ವರ್ತುಲಾಕಾರದ ಫ್ಲೈ ಓವರ್ ಕಾಮಗಾರಿ – ಉದ್ಘಾಟನೆ ಯಾವಾಗ Next post ಶಿವಮೊಗ್ಗ : ಪೂರ್ಣ ಹಂತಕ್ಕೆ ವರ್ತುಲಾಕಾರದ ಫ್ಲೈ ಓವರ್ ಕಾಮಗಾರಿ – ಉದ್ಘಾಟನೆ ಯಾವಾಗ?