ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿಗಳಾಗಿ ವರಣ್ ವಿ ಪಂಡಿತ್, ಉಲ್ಲಾಸ್ ಎಮ್ ಶೆಟ್ಟಿ ಆಯ್ಕೆ

ಶಿವಮೊಗ್ಗ, ಫೆ. 16: ಎನ್.ಎಸ್.ಯು.ಐ. ಸಂಘಟನೆಯ ಶಿವಮೊಗ್ಗ ನಗರ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾಗಿ ವರಣ್ ವಿ ಪಂಡಿತ್ ಹಾಗೂ ಉಲ್ಲಾಸ್ ಎಮ್ ಶೆಟ್ಟಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರವರ ಆದೇಶದ ಮೇರೆಗೆ ನಗರಾಧ್ಯಕ್ಷ ಚರಣ್ ಅವರು ನೂತನ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಸಂಘಟನೆ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ವಿದ್ಯಾರ್ಥಿಗಳ ಹಿತರಕ್ಷಣೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಗಳಿಗೆ ಸಂಘಟನೆ ಮುಖಂಡರು ಹಾಗೂ ಸದಸ್ಯರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Previous post ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ..!
Next post ಸಚಿವ ಅಶ್ವತ್ಥ್ ನಾರಾಯಣ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಿಂದ ಮನವಿ