Sexual harassment of 15-year-old girl: 19-year-old man sentenced to 20 years of rigorous imprisonment! 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

ಶಿವಮೊಗ್ಗ, ಜ. 14: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನಿಗೆ, 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ – II (POCSO) ತೀರ್ಪು ನೀಡಿದೆ.

ಭದ್ರಾವತಿ ನಗರದ ನಿವಾಸಿಯಾದ 19 ವರ್ಷದ ಯುವಕನೇ ಶಿಕ್ಷೆಗೆ ಗುರಿಯಾದವನೆಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 1,10,000 ರೂ. ದಂಡ ವಿಧಿಸಲಾಗಿದೆ. ದಂಡಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 06 ತಿಂಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.

ಹಾಗೂ ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ1,00,000 ರೂ. ಮತ್ತು ಪರಿಹಾರವಾಗಿ 3,00,000 ರೂ. ನೀಡಲು ನ್ಯಾಯಾಧೀಶರಾದ ಮೋಹನ್ ಜೆ.ಎಸ್. ರವರು 11-01-2024 ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರುಗಳಾದ ಹರಿಪ್ರಸಾದ್ ಮತ್ತು ಶ್ರೀಧರ್  ರವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ ಯುವಕನು 15 ವರ್ಷದ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿಯು ಗರ್ಭೀಣಿಯಾಗಿದ್ದಳು. ಈ ಕುರಿತಂತೆ 2022 ನೇ ಸಾಲಿನಲ್ಲಿ ನೊಂದ ಬಾಲಕಿಯ ತಂದೆಯು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಂದಿನ ತನಿಖಾಧಿಕಾರಿಗಳಾಗಿದ್ದ ಸರ್ಕಲ್ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Youth fund scheme launched in Shimoga: 5 guarantees implemented as announced in elections - CM Siddaramaiah ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ : ಚುನಾವಣೆಯಲ್ಲಿ ಘೋಷಿಸಿದಂತೆ 5 ಗ್ಯಾರಂಟಿ ಜಾರಿ - ಸಿಎಂ ಸಿದ್ದರಾಮಯ್ಯ Previous post ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ : ಚುನಾವಣೆಯಲ್ಲಿ ಘೋಷಿಸಿದಂತೆ 5 ಗ್ಯಾರಂಟಿ ಜಾರಿ – ಸಿಎಂ ಸಿದ್ದರಾಮಯ್ಯ
The accused of Shikaripura who cheated Tarikere old woman in Shimoga with a fake gold chain was arrested! ಶಿವಮೊಗ್ಗದಲ್ಲಿ ತರೀಕೆರೆ ವೃದ್ದೆಗೆ ನಕಲಿ ಬಂಗಾರದ ಸರ ನೀಡಿ ವಂಚಿಸಿದ್ದ ಶಿಕಾರಿಪುರದ ಆರೋಪಿ ಸೆರೆ! Next post ಶಿವಮೊಗ್ಗದಲ್ಲಿ ತರೀಕೆರೆ ವೃದ್ದೆಗೆ ನಕಲಿ ಬಂಗಾರದ ಸರ ನೀಡಿ ವಂಚಿಸಿದ್ದ ಶಿಕಾರಿಪುರದ ಆರೋಪಿ ಸೆರೆ!