
ಶಿರಾಳಕೊಪ್ಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು : ಗೋವಾದ ಆರೋಪಿ ಸೆರೆ!
ಶಿಕಾರಿಪುರ, ಜ. 19: ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದ ಆರೋಪಿಯೋರ್ವನನ್ನು, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮೂಲತಃ ಹುಬ್ಬಳ್ಳಿಯ ಜನ್ನತ್ ನಗರದ ನಿವಾಸಿಯಾದ ಪ್ರಸ್ತುತ ಗೋವಾ ರಾಜ್ಯದ ವಾಸ್ಕೋದಲ್ಲಿ ನೆಲೆಸಿರುವ ಖಾಜಾ ಹಾವೇರಿ ಯಾನೆ ಖಾಜಾ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಶಿರಾಳಕೊಪ್ಪ ಠಾಣಾ (shiralkoppa police station) ವ್ಯಾಪ್ತಿಯ ಪ್ರದೇಶವೊಂದರಲ್ಲಿ ಜ. 18 ರಂದು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಆರೋಪಿಯಿಂದ 6,81,200 ರೂ. ಮೌಲ್ಯದ 111. 85 ಗ್ರಾಂ ತೂಕದ ಬಂಗಾರ (gold) ಹಾಗೂ 326 ಗ್ರಾಂ ತೂಕದ ಬೆಳ್ಳಿ (silver) ಆಭರಣಗಳು (jewelry) ಮತ್ತು 35 ಸಾವಿರ ರೂ. ಮೌಲ್ಯದ ದ್ವಿ ಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಇವುಗಳ ಮೌಲ್ಯ 7,16,200 ರೂ. ಗಳಾಗಿದೆ. ಈತನ ಬಂಧನದಿಂದ ಶಿರಾಳಕೊಪ್ಪ ಹಾಗೂ ಹಾನಗಲ್ (hangal) ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಎರಡು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಶಿಕಾರಿಪುರ (shikaripura) ಡಿವೈಎಸ್ಪಿ ಶಿವಾನಂದ ಮದರಕಂಡಿ, ಸರ್ಕಲ್ ಇನ್ಸ್’ಪೆಕ್ಟರ್ ರುದ್ರೇಶ‍್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ಎಸ್. ಕುರಿ, ಪುಷ್ಪಾ, ಬೆರಳು ಮುದ್ರೆ ಘಟಕದ ಪಿಎಸ್ಐ ಕೆಂಚಪ್ಪ, ಎಎಸ್ಐ ರಮೇಶ್ ನಾಯ್ಕ್, ಸಿಬ್ಬಂದಿಗಳಾದ ಸಂತೋಷ್, ಮಹದೇವ್, ಸಲ್ಮಾನ್, ಕಾರ್ತಿಕ್, ಅಶೋಕ, ನಾಗರಾಜ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ ಕಳವು : 28-12-2023 ರಂದು ಶಿರಾಳಕೊಪ್ಪ ಪಟ್ಟಣದ ಭೋವಿ ಕಾಲೋನಿಯ ನಿವಾಸಿ ಪ್ರಭಾಕರ ಶಿಲ್ಪಿ ಎಂಬುವರ ಮನೆಯಲ್ಲಿ 6.81 ಲಕ್ಷ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು (theft) ಮಾಡಲಾಗಿತ್ತು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ತಂಡಕ್ಕೆ ಅಭಿನಂದನೆ : ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಸಫಲರಾದ ಪೊಲೀಸರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.