Shimoga : Government Tool Shop and Training Center invites applications for the post of Guest Lecturer ಶಿವಮೊಗ್ಗ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಸರ್ಕಾರಿ ಉಪಕರಣಾಗಾರ -ತರಬೇತಿ ಕೇಂದ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜ. 24 : ಶಿವಮೊಗ್ಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅತಿಥಿ  ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಬಿ ಇ, ಎಂ ಟೆಕ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಟೆಲಿ ಕಮ್ಯುನಿಕೇಷನ್ ವಿಭಾಗದಲ್ಲಿ ಪದವಿ ಪಡೆದಿರುವ ಹಾಗೂ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಯ ವಯೋಮಿತಿ ಗರಿಷ್ಠ 38 ವರ್ಷ ಇರಬೇಕು. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಕೇಂದ್ರದ ಪರಿಮಿತಿಗೆ ಒಳಪಟ್ಟಿರುತ್ತದೆ. 

ಅರ್ಜಿಯನ್ನು ಸಲ್ಲಿಸಲು  27-01-2024  ಕೊನೆಯ ದಿನಾಂಕ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ  ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂಬರ್ ಸಿಎ 38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ದೂ.ಸಂ: 08182-246054, 9448307027, 9902232839 ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

Dress code for written test for armed police constable posts : No shoes jeans pants! ಸಶಸ್ತ್ರ ಪೊಲೀಸ್ ಕಾನ್ಸ್’ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷಗೆ ವಸ್ತ್ರ ಸಂಹಿತೆ : ಶೂ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ! Previous post ಸಶಸ್ತ್ರ ಪೊಲೀಸ್ ಕಾನ್ಸ್’ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷಗೆ ವಸ್ತ್ರ ಸಂಹಿತೆ : ಶೂ, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ!
janauray On 25th there was power cut in villages around Kumsi and Ayanur ಜ. 25 ರಂದು ಕುಂಸಿ ಆಯನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ Next post ಜ. 25 ರಂದು ಕುಂಸಿ, ಆಯನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ