Shimoga: SP honored ASI Sriharsha who was conscious of time ಶಿವಮೊಗ್ಗ : ಸಮಯ ಪ್ರಜ್ಞೆ ಮೆರೆದ ASI ಶ್ರೀಹರ್ಷಗೆ ಸನ್ಮಾನಿಸಿದ SP

ಶಿವಮೊಗ್ಗ : ಸಮಯ ಪ್ರಜ್ಞೆ ಮೆರೆದ ASI ಶ್ರೀಹರ್ಷಗೆ ಸನ್ಮಾನಿಸಿದ SP 

ಶಿವಮೊಗ್ಗ, ಜ. 24: ಸಮಯ ಪ್ರಜ್ಞೆ ಹಾಗೂ ಸಂಯಮದ ಕಾರ್ಯನಿರ್ವಹಣೆ ಮೂಲಕ, ಸಾರ್ವಜನಿಕ ಸಮಾರಂಭ ಸ್ಥಳದಲ್ಲಿ ದಿಢೀರ್ ಏರ್ಪಟ್ಟ ಗೊಂದಲದ ವಾತಾವರಣ ನಿಯಂತ್ರಿಸುವಲ್ಲಿ ಸಫಲರಾದ, ಕೋಟೆ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಶ್ರೀಹರ್ಷ ಅವರಿಗೆ ಎಸ್ಪಿ (SP) ಜಿ.ಕೆ.ಮಿಥುನ್ ಕುಮಾರ್ ಸನ್ಮಾನಿಸಿ ಅಭಿನಂದಿಸಿದ್ದಾರೆ.

22-01-2024 ರಂದು ಮಧ್ಯಾಹ್ನ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ, ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಿಹಿ ವಿತರಣೆ ಕಾರ್ಯಕ್ರಮದ ವೇಳೆ ದಿಢೀರ್ ಗೊಂದಲ ಸೃಷ್ಟಿಯಾಗಿತ್ತು. 

ಸ್ಥಳದಲ್ಲಿ ಕರ್ತವ್ಯನಿರತರಾಗಿದ್ದ ಶ್ರೀಹರ್ಷ ಅವರು ಸಮಯ ಪ್ರಜ್ಞೆ ತೋರಿ ಅತ್ಯಂತ ಸಂಯಮದಿಂದ ಪರಿಸ್ಥಿತಿ ನಿಭಾಯಿಸಿದ್ದರು. ಘಟನೆ ದೊಡ್ಡದಾಗದಂತೆ ಪರಿಸ್ಥಿತಿ ತಿಳಿಗೊಳಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದರು.

ಉತ್ತಮ ಕಾರ್ಯನಿರ್ವಹಣೆ ಮೆಚ್ಚಿ ಜ.24 ರಂದು ಸಂಜೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶ್ರೀಹರ್ಷ ಅವರಿಗೆ ಎಸ್ಪಿ ಸನ್ಮಾನಿಸಿದರು. ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.

janauray On 25th there was power cut in villages around Kumsi and Ayanur ಜ. 25 ರಂದು ಕುಂಸಿ ಆಯನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ Previous post ಜ. 25 ರಂದು ಕುಂಸಿ, ಆಯನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
Theft of gold jewelery in the shop where he was working: Shimoga police arrested the accused and brought him to Kolkata! ಕೆಲಸಕ್ಕಿದ್ದ ಅಂಗಡಿಯಲ್ಲಿಯೇ ಚಿನ್ನಾಭರಣ ಅಪಹರಣ : ಕೊಲ್ಕತ್ತಾದಲ್ಲಿ ಆರೋಪಿ ಬಂಧಿಸಿ ಕರೆತಂದ ಶಿವಮೊಗ್ಗ ಪೊಲೀಸರು! Next post ಕೆಲಸಕ್ಕಿದ್ದ ಅಂಗಡಿಯಲ್ಲಿಯೇ ಚಿನ್ನಾಭರಣ ಅಪಹರಣ : ಕೊಲ್ಕತ್ತಾದಲ್ಲಿ ಆರೋಪಿ ಬಂಧಿಸಿ ಕರೆತಂದ ಶಿವಮೊಗ್ಗ ಪೊಲೀಸರು!