Forest department dead line for citizens to return wildlife items including tiger claw..! ಹುಲಿ ಉಗುರು ಸೇರಿದಂತೆ ವನ್ಯಜೀವಿ ವಸ್ತುಗಳನ್ನು ಹಿಂದಿರುಗಿಸಲು ನಾಗರೀಕರಿಗೆ ಅರಣ್ಯ ಇಲಾಖೆ ಡೆಡ್ ಲೈನ್..!

ವನ್ಯಜೀವಿ ವಸ್ತುಗಳನ್ನು ಹಿಂದಿರುಗಿಸಲು ನಾಗರೀಕರಿಗೆ ಅರಣ್ಯ ಇಲಾಖೆ ಡೆಡ್ ಲೈನ್..!

ಶಿವಮೊಗ್ಗ, ಜ. 25: ಹುಲಿ ಉಗುರು ಪ್ರಕರಣದ ನಂತರ, ರಾಜ್ಯಾದ್ಯಂತ ಅರಣ್ಯ ಜೀವಿ ವಸ್ತುಗಳನ್ನು ಕಾನೂನುಬಾಹಿರವಾಗಿ ಹೊಂದಿರುವವರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ನಡುವೆ ರಾಜ್ಯ ಅರಣ್ಯ ಇಲಾಖೆಯು, ವನ್ಯಜೀವಿ ವಸ್ತುಗಳನ್ನು ಹಿಂದಿರುಗಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.

ವನ್ಯಜೀವಿ, ಅಘೋಷಿತ ವನ್ಯಜೀವಿ / ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಏಪ್ರಿಲ್ 11 ರೊಳಗೆ ಅಧ್ಯರ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅರಣ್ಯ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸದರಿ ವಸ್ತುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ), ವಲಯ ಅರಣ್ಯಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ),

ಅಥವಾ ಹತ್ತಿರದ ಪೊಲೀಸ್ ಠಾಣೆ ಮುಖ್ಯಸ್ಥರುಗಳಲ್ಲಿ ನಮೂನೆ-1ನ್ನು ಪಡೆದು 100 ರೂಪಾಯಿ ಮೌಲ್ಯದ ಛಾಪಾ ಕಾಗದದಲ್ಲಿ ಅಫಿಡವಿಟ್ – ನೋಟರಿ ಮಾಡಿಸಿ ಅಧ್ಯರ್ಪಿಸುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಯಾವುದೇ ಕಚೇರಿಯನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Theft of gold jewelery in the shop where he was working: Shimoga police arrested the accused and brought him to Kolkata! ಕೆಲಸಕ್ಕಿದ್ದ ಅಂಗಡಿಯಲ್ಲಿಯೇ ಚಿನ್ನಾಭರಣ ಅಪಹರಣ : ಕೊಲ್ಕತ್ತಾದಲ್ಲಿ ಆರೋಪಿ ಬಂಧಿಸಿ ಕರೆತಂದ ಶಿವಮೊಗ್ಗ ಪೊಲೀಸರು! Previous post ಕೆಲಸಕ್ಕಿದ್ದ ಅಂಗಡಿಯಲ್ಲಿಯೇ ಚಿನ್ನಾಭರಣ ಅಪಹರಣ : ಕೊಲ್ಕತ್ತಾದಲ್ಲಿ ಆರೋಪಿ ಬಂಧಿಸಿ ಕರೆತಂದ ಶಿವಮೊಗ್ಗ ಪೊಲೀಸರು!
J. 29 to Feb. Power outage in villages around Santhekadur of Shimoga taluk till 03 ಜ.29 ರಿಂದ ಫೆ.03 ರವರೆಗೆ ಶಿವಮೊಗ್ಗ ತಾಲೂಕಿನ ಸಂತೇಕಡೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ Next post ಜ. 29 ರಿಂದ ಫೆ. 03 ರವರೆಗೆ ಶಿವಮೊಗ್ಗ ತಾಲೂಕಿನ ಸಂತೇಕಡೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ