Andar-Bahar Ispeet Gambling at Shimoga Temporary Employees Association Recreation Club :18 people arrested ಶಿವಮೊಗ್ಗದ ಹಂಗಾಮಿ ನೌಕರರ ಸಂಘದ ರಿಕ್ರಿಯೇಷನ್ ಕ್ಲಬ್ ನಲ್ಲಿ ಅಂದರ್ - ಬಾಹರ್ ಇಸ್ಪೀಟ್ ಜೂಜು : 18 ಜನರ ಬಂಧನ

ಶಿವಮೊಗ್ಗದ ಹಂಗಾಮಿ ನೌಕರರ ಸಂಘದ ರಿಕ್ರಿಯೇಷನ್ ಕ್ಲಬ್ ನಲ್ಲಿ ಅಂದರ್  – ಬಾಹರ್ ಇಸ್ಪೀಟ್ ಜೂಜು : 18 ಜನರ ಬಂಧನ

ಶಿವಮೊಗ್ಗ, ಜ. 29: ಸಂಘವೊಂದರ ಮನರಂಜನಾ (ರಿಕ್ರಿಯೇಷನ್) ಕ್ಲಬ್ ಮೇಲೆ ದೊಡ್ಡಪೇಟೆ ಠಾಣೆ ಪೊಲೀಸರು ದಾಳಿ ನಡೆಸಿ, ಅಂದರ್ –ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ, 18 ಜನರನ್ನು ಬಂಧಿಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

 ಗಾರ್ಡನ್ ಏರಿಯಾದ ತುಂಗಾಭದ್ರಾ ಹಂಗಾಮಿ ನೌಕರರ ಮನೋರಂಜನಾ ಸಂಘದ ಕ್ಲಬ್ ಮೇಲೆ ಜ. 28 ರ ಸಂಜೆ, ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಖಚಿತ ವರ್ತಮಾನದ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಆರೋಪಿಗಳಿಂದ 21,700 ನಗದು, ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೆಪಿ ಕಾಯ್ದೆ ತಿದ್ದುಪಡಿ 2021 ಕಲಂ 79, 80 ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಇನ್ಸ್’ಪೆಕ್ಟರ್ ರವಿ ಪಾಟೀಲ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

'If there was no constitution KS Eshwarappa CT Ravi R Ashok would have had to work in the fields without becoming MLAs': CM Siddaramaiah ‘ಸಂವಿಧಾನ ಇಲ್ಲದಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ ಆರ್.ಅಶೋಕ್ ಶಾಸಕರಾಗದೆ ಹೊಲ ಗದ್ದೆಗಳಲ್ಲಿ ಕೂಲಿ ಮಾಡಬೇಕಾಗಿತ್ತು’ : ಸಿಎಂ ಸಿದ್ದರಾಮಯ್ಯ Previous post ‘ಸಂವಿಧಾನ ಇಲ್ಲದಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ, ಆರ್.ಅಶೋಕ್ ಶಾಸಕರಾಗದೆ ಹೊಲ ಗದ್ದೆಗಳಲ್ಲಿ ಕೂಲಿ ಮಾಡಬೇಕಾಗಿತ್ತು’: ಸಿಎಂ ಸಿದ್ದರಾಮಯ್ಯ
'I too am a Hindu I love people of all religions': Chief Minister Siddaramaiah ‘ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ’ : ಮುಖ್ಯಮಂತ್ರಿ ಸಿದ್ದರಾಮಯ್ಯ Next post ‘ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ’ : ಮುಖ್ಯಮಂತ್ರಿ ಸಿದ್ದರಾಮಯ್ಯ