Water from Bhadra Reservoir to Tunga-Bhadra River; Public caution is advised ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ನೀರು ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ Water for Gadag Betageri Haveri Ranebennur Badagi Kudlagi Kottoor Hagaribommanahalli Hirekerur ಗದಗ ಬೆಟಗೇರಿ ಹಾವೇರಿ ರಾಣೇಬೆನ್ನೂರು ಬ್ಯಾಡಗಿ ಕೂಡ್ಲಗಿ ಕೊಟ್ಟೂರು ಹಗರಿಬೊಮ್ಮನಹಳ್ಳಿ, ಹಿರೇಕೆರೂರಿಗೆ ನೀರು

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ, ಫೆ. 1: 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ 05-02-2024 ರ ರಾತ್ರಿ 10.00 ರಿಂದ 10-02-2024 ರ ರಾತ್ರಿ 10 ಗಂಟೆಯವರೆಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಈ ಕುರಿತಂತೆ ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಹಾವೇರಿ, ಗದಗ ಮತ್ತು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗದಗ, ಬೆಟಗೇರಿ, ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಕೂಡ್ಲಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಕುಡಿಯುವ ನೀರು ಒದಗಿಸಲು

ಹಾಗೆಯೇ ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ತುಂಗ-ಭದ್ರಾ ನದಿಗೆ ದಿನಾಂಕ: 05-02-2024 ರ ರಾತ್ರಿ 10.00 ರಿಂದ 10-02-2024 ರ ರಾತ್ರಿ 10 ಗಂಟೆಯವರೆಗೆ ಪ್ರತಿ ದಿನ 2000 ಕ್ಯೂಸೆಕ್ಸ್‍ನಂತೆ ಒಟ್ಟು 12000 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು.

ಈ ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What is the truth behind the viral video? : Arrest of two people who threatened traffic police! ವೈರಲ್ ಆಗುತ್ತಿರುವ ವೀಡಿಯೋದ ಸತ್ಯಾಂಶವೇನು? : ಟ್ರಾಫಿಕ್ ಪೊಲೀಸ್’ಗೆ ಬೆದರಿಕೆ ಹಾಕಿದ ಇಬ್ಬರ ಬಂಧನ – ಎಸ್ಪಿ ಹೇಳಿದ್ದೇನು? Previous post ವೈರಲ್ ಆಗುತ್ತಿರುವ ವೀಡಿಯೋದ ಸತ್ಯಾಂಶವೇನು? : ಟ್ರಾಫಿಕ್ ಪೊಲೀಸ್’ಗೆ ಬೆದರಿಕೆ ಹಾಕಿದ ಇಬ್ಬರ ಬಂಧನ!
Not development India's disastrous budget': CM Siddaramaiah criticizes ವಿಕಸಿತವಲ್ಲ ಭಾರತದ ವಿನಾಶಕಾರಿ ಬಜೆಟ್ : ಕೇಂದ್ರ ಆಯವ್ಯಯ ವಿರುದ್ದ ಸಿದ್ದರಾಮಯ್ಯ ಟೀಕಾಪ್ರಹಾರ Next post ‘ವಿಕಸಿತವಲ್ಲ, ಭಾರತದ ವಿನಾಶಕಾರಿ ಬಜೆಟ್’ :  ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ