
ಗೋವಾದ ಮಾಪುಸಾ ನಗರದಲ್ಲಿ ಗೋಬಿ ಮಂಚೂರಿ ತಯಾರಿಕೆ, ಮಾರಾಟ ನಿಷೇಧ!
ಮಾಪುಸಾ (ಗೋವಾ), ಫೆ. 6: ಆಹಾರ ಖಾದ್ಯಗಳಲ್ಲಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿರುವ, ತಿನಿಸು ಪ್ರಿಯರ ಅಚ್ಚುಮೆಚ್ಚಿನ ತಿಂಡಿಯಾದ ಗೋಬಿ ಮಂಚೂರಿಯನ್ (Gobi Manchurian) ತಯಾರಿಕೆ ಮತ್ತು ಮಾರಾಟ ನಿಷೇಧಿಸಿ, ಗೋವಾದ ಮಾಪುಸಾ ನಗರದ ಮುನ್ಸಿಪಲ್ ಕೌನ್ಸಿಲ್ (MMC) ಆದೇಶ ಹೊರಡಿಸಿದೆ.
ಅನೈರ್ಮಲ್ಯ ಸ್ಥಳಗಳಲ್ಲಿ ತಯಾರಿಕೆ, ಕೃತಕ ಬಣ್ಣಗಳ ಬಳಕೆ, ಬಟ್ಟೆ ತೊಳೆಯುವ ಪೌಡರ್ ಬಳಸಿ ತಯಾರಿಸಲಾದ ಸಾಸ್‌ಗಳ ಬಳಕೆ ಆರೋಪದ ಹಿನ್ನೆಲೆಯಲ್ಲಿ, ಗೋಬಿ ಮಂಚೂರಿಯನ್ ನಿಷೇಧಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗಿದೆ.
2022 ರಲ್ಲಿ, ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಆಹಾರ ಮತ್ತು ಔಷಧಗಳ ಆಡಳಿತವು (ಎಫ್‌ಡಿಎ) ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್‌ಗೆ ಗೋಬಿ ಮಂಚೂರಿಯನ್ ಮಾರಾಟ ಮಳಿಗೆಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಿತ್ತು.
ಇದೀಗ ಬೋಡ್ಗೇಶ್ವರ್ ಜಾತ್ರೆಗೂ ಮುನ್ನ ಗೋಬಿ ಮಂಚೂರಿಯನ್ ಮಳಿಗೆಗಳನ್ನು ನಿರ್ಬಂಧಿಸುವ ಆದೇಶವನ್ನು ಮಾಪುಸಾ ನಗರದ ಮುನ್ಸಿಪಲ್ ಕೌನ್ಸಿಲ್ ಕೈಗೊಂಡಿದೆ.
ಅನೈರ್ಮಲ್ಯ ಸ್ಥಳಗಳಲ್ಲಿ ತಯಾರಿಕೆ, ಕೃತಕ ಬಣ್ಣಗಳ ಬಳಕೆ, ಬಟ್ಟೆ ತೊಳೆಯುವ ಪೌಡರ್ ಬಳಸಿ ತಯಾರಿಸಲಾದ ಸಾಸ್‌ಗಳಿಂದ ಮಾಡಿದ ಗೋಬಿ ಮಂಚೂರಿಯನ್ ಸೇವಿಸುವ ನಾಗರೀಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಅಭಿಪ್ರಾಯವಾಗಿದೆ.