Jana Spandan program : More than 11 thousand applications received ಜನಸ್ಪಂದನ ಕಾರ್ಯಕ್ರಮ: 11 ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕಾರ

ಜನಸ್ಪಂದನ : 11 ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕಾರ

ಬೆಂಗಳೂರು, ಫೆ. 8: ಇಂದಿನ ಜನ ಸ್ಪಂದನ (Jana Spandana) ಕಾರ್ಯಕ್ರಮದಲ್ಲಿ 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. 20 ಸಾವಿರ ಮಂದಿ ಭಾಗಿ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (cm siddaramaiah) ಅವರು ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ (vidhana soudha) ಆವರಣದಲ್ಲಿ ನಡೆದ ಎರಡನೇ ಜನಸ್ಪಂದನ ಕಾರ್ಯಕ್ರಮದ ವೇಳೆ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಸಮಯ ಮಿತಿಯೊಳಗೆ ಬಗೆ ಹರಿಸುತ್ತಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರ ವ್ಯಾಪ್ತಿಯ ಅರ್ಜಿಗಳನ್ನು ಆದಷ್ಟು ಬೇಗ ಪರಿಹರಿಸಲು ಸೂಚನೆ ನೀಡಿದ್ದೇನೆ ಎಂದರು.

ಮೊದಲ ಜನ ಸ್ಪಂದನೆಯಲ್ಲಿ ಬಂದ ಅರ್ಜಿಗಳಲ್ಲಿ 98% ಪರಿಹಾರ ದೊರಕಿವೆ. ಈ ಬಾರಿಯೂ ಅಷ್ಟೇ ತ್ವರಿತವಾಗಿ ಪರಿಹಾರ ಒದಗಿಸಲು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. DC, CEO ಗಳ ಮೇಲೆ ಈ ಜವಾಬ್ದಾರಿ ಹೆಚ್ಚು ಎಂದು ಹೇಳಿದರು.

ಆಡಳಿತ ಜಡತ್ವದಿಂದ ಕೂಡಿರಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತೇನೆ. ನಿಮ್ಮ ಹಂತದಲ್ಲೇ ಸಮಸ್ಯೆ ಬಗೆಹರಿಸಿ ಎನ್ನುವ ಎಚ್ಚರಿಕೆ ಕೊಡುತ್ತೇನೆ. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದು ತಿಂಗಳೊಳಗೆ ಅಹವಾಲುಗಳ ವಿಲೇವಾರಿಗೆ DC, CEO ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಿದ ಸಿಎಂ, ಎಲ್ಲಾ ಅರ್ಜಿಗಳನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದರು.

30 thousand rupees to the mother who allowed her 17-year-old son to drive a moped. Penalty! 17 ವರ್ಷದ ಪುತ್ರನಿಗೆ ಮೊಪೆಡ್ ಓಡಿಸಲು ಅವಕಾಶ ನೀಡಿದ ತಾಯಿಗೆ 30 ಸಾವಿರ ರೂ. ದಂಡ! Previous post 17 ವರ್ಷದ ಪುತ್ರನಿಗೆ ಮೊಪೆಡ್ ಓಡಿಸಲು ಅವಕಾಶ ನೀಡಿದ ತಾಯಿಗೆ 30 ಸಾವಿರ ರೂ. ದಂಡ!
'0% development 40% commission... Answer Siddaramaiah...' said BJP MLA DS Arun! ‘0% ಅಭಿವೃದ್ಧಿ 40% ಕಮಿಷನ್… ಉತ್ತರ ಕೊಡಿ ಸಿದ್ದರಾಮಯ್ಯ…’ ಎಂದ ಬಿಜೆಪಿ ಶಾಸಕ ಡಿ.ಎಸ್.ಅರುಣ್! Next post ‘0% ಅಭಿವೃದ್ಧಿ, 40% ಕಮಿಷನ್… ಉತ್ತರ ಕೊಡಿ ಸಿದ್ದರಾಮಯ್ಯ…’ ಎಂದ ಬಿಜೆಪಿ ಶಾಸಕ ಡಿ.ಎಸ್.ಅರುಣ್!