Farmer leaders demand the state government to announce programs in agriculture like guarantee schemes ಗ್ಯಾರಂಟಿ ಯೋಜನೆಗಳಂತೆ ಕೃಷಿಯಲ್ಲೂ ಕಾರ್ಯಕ್ರಮಗಳ ಘೋಷಣೆಗೆ ರಾಜ್ಯ ಸರ್ಕಾರಕ್ಕೆ ರೈತ ಮುಖಂಡರ ಆಗ್ರಹ

ಗ್ಯಾರಂಟಿ ಯೋಜನೆಗಳಂತೆ ಕೃಷಿಯಲ್ಲೂ ಕಾರ್ಯಕ್ರಮಗಳ ಘೋಷಣೆಗೆ ರೈತ ಮುಖಂಡರ ಆಗ್ರಹ

ಬೆಂಗಳೂರು, ಫೆ. 11: ಗ್ಯಾರಂಟಿ ಯೋಜನೆಗಳ ಯಶಸ್ವಿಯಾಗಿ ಜಾರಿಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ರೈತ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಭಾನುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವ ರೈತ ಮುಖಂಡರು ಮತ್ತು ರೈತ ಹೋರಾಟಗಾರರ ಸಭೆಯಲ್ಲಿ, ತಮ್ಮ ಬೇಡಿಕೆಗಳನ್ನು ಮಂಡಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಯ ಬಗ್ಗೆ ಮೆಚ್ಚುಗೆ ಸೂಚಿಸಿ ಸಿಎಂಗೆ ಅಭಿನಂದಿಸಿದರು. 

ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿರುವುದನ್ನು ವಿವರಿಸಿದ ಬಡಗಲಾಪುರ ನಾಗೇಂದ್ರ ಅವರು, ರೈತರ ಮತ್ತು ಜನ ಸಮುದಾಯದ ಪೌಷ್ಠಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಸಲಹೆ ನೀಡಿದರು. ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ ಸಿಎಂ, ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

ಬಹಳ ಕಷ್ಟ ಪಟ್ಟು ಗ್ಯಾರಂಟಿ ಯೋಜನೆಗಳನ್ನು ಇಷ್ಟು ಶೀಘ್ರವಾಗಿ ಜಾರಿ ಮಾಡಿದ್ದೀರಿ. ಇದರ ಅನುಕೂಲ ರಾಜ್ಯದ ಜನರಿಗೆ ಆಗುತ್ತಿರುವ ಹೊತ್ತಲ್ಲಿ ಟೀಕೆಗಳಿಗೆ ಅಂಜುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯಗಳು ರೈತ ಪ್ರತಿನಿಧಿಗಳಿಂದ ವ್ಯಕ್ತವಾಯಿತು. 

ಇವೆಲ್ಲದರ ಜತೆಗೆ ಕೃಷಿ ಇಲಾಖೆ ಅಧಿಕಾರಿಗಳು ಬೀಜ, ಗೊಬ್ಬರ ವಿತರಿಸುವುದಕ್ಕೆ ಮಾತ್ರ ಸೀಮಿತ ಆಗದೆ ಇವತ್ತಿನ ಕೃಷಿ ಬೇಡಿಕೆಗಳಿಗೆ ತಕ್ಕಂತೆ ಅಪ್ ಡೇಟ್ ಆಗಬೇಕು, ಕೆರೆಗಳ ಅಭಿವೃದ್ಧಿ, ಮಂಡ್ಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಹಣ ಸಹಾಯ ಕೊಟ್ಟಿರುವುದು ಸ್ವಾಗತಿಸಿ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ಮುಂದಾಗಬೇಕು,

ರೈತ ಯುವಕ-ಯುವತಿಯರಿಗೆ ಭರವಸೆ ಹುಟ್ಟಿಸುವ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಘೋಷಿಸಬೇಕು, ಕೃಷಿಯಲ್ಲಿ ರಾಜ್ಯ ಮಾದರಿ ಆಗುವ ಕಾರ್ಯಕ್ರಮ ರೂಪಿಸಿ ಎನ್ನುವುದೂ ಸೇರಿದಂತೆ ನೂರಕ್ಕೂ ಅಧಿಕ ಬೇಡಿಕೆಗಳನ್ನು ರೈತ ಮುಖಂಡರು ಮುಖ್ಯಮಂತ್ರಿಗಳ ಎದುರು ಮಂಡಿಸಿದರು.

Blood Donation by Shimoga Traffic Police ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ರಕ್ತದಾನ Previous post ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ರಕ್ತದಾನ
What is the truth behind the viral video of the gun show? : The fake air pistol of Maklaklata was shown to the light! ಗನ್ ಪ್ರದರ್ಶನದ ವೈರಲ್ ವೀಡಿಯೋದ ಸತ್ಯಾಂಶವೇನು? : ಮಕ್ಕಳಾಟದ ನಕಲಿ ಏರ್ ಪಿಸ್ತೂಲ್ ತೋರಿಸಿದ್ದು ಬೆಳಕಿಗೆ! Next post ಗನ್ ಪ್ರದರ್ಶನದ ವೈರಲ್ ವೀಡಿಯೋದ ಸತ್ಯಾಂಶವೇನು? : ಮಕ್ಕಳಾಟದ ನಕಲಿ ಏರ್ ಪಿಸ್ತೂಲ್ ತೋರಿಸಿದ್ದು ಬೆಳಕಿಗೆ…!